

ಅರಸೀಕೆರೆ: ಶ್ರೀರಾಮಸೇನೆ ವತಿಯಿಂದ ಅರಸೀಕೆರೆ ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ಭಾನುವಾರ ರಾಮನವಮಿ ಹಮ್ಮಿಕೊಳ್ಳಲಾಗಿತ್ತು. ಸಂಘಟನೆಯ ಮುಖಂಡರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಾನಕ,ಫಲಹಾರ ವಿತರಿಸಿದರು. ಮುಖಂಡರಾದ ವರುಣ್, ಸಚಿನ್, ದೀಪು ,ಉಪೇಂದ್ರ ,ಸುನಿಲ್, ಪ್ರಸಾದ್, ಪೃಥ್ವಿ, ಯತೀಶ್ ,ನಂದನ್ , ಪ್ರದೀಪ್ ,ವಾಸು, ಮಣಿ, ನಾರಾಯಣ್ ,ಶಿವಶಂಕರ್, ಕೃಷ್ಣ ಹಾಗೂ ನಿಖಿಲ್ , ಉಮೇಶ್, ದಿವಾಕರ್, ಚಂದನ್ ಸೇರಿದಂತೆ ನೂರಾರು ಯುವಕರು ಪಾಲ್ಗೊಂಡಿದ್ದರು. ಭುವನೇಶ್ವರಿ ಕಾರು ಚಾಲಕರ ಸಂಘದ ವತಿಯಿಂದ ರಾಮನವಮಿ ಆಚರಿಸಲಾಯಿತು.