

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಜಾವಗಲ್ ಹೋಬಳಿಯ ಕರಗುಂದ ದೇಶಾಣಿ ಗೊಲ್ಲರಹಟ್ಟಿ ಗೆ ಸೇರಿರುವ 16 ಸುತ್ತಳ್ಳಿ ಪುರಾಣ ಪ್ರಸಿದ್ಧ ಶ್ರೀ ಹೋತಕಲ್ಲಮ್ಮ ದೇವಿಯವರ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ದೇವಿ ಜಾತ್ರೆ ಪ್ರಯುಕ್ತ ಗ್ರಾಮದಲ್ಲಿ ಬೆಳಗ್ಗೆ ಕಪೂರ್ರ್ರ ಸೇವೆ ನೆರವೇರಿತು. ಗ್ರಾಮದ ರಾಜಬೀದಿಗಳಲ್ಲಿ ವಿಶೇಷ ಉತ್ಸವ ಮತ್ತು ಸೋಮನ ಕುಣಿತ ಅದ್ದೂರಿಯಾಗಿ ನಡೆದು ಗಮನ ಸೆಳೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಶ್ರದ್ದಾ, ಭಕ್ತಿ, ಸಡಗರ ಸಂಭ್ರಮದಿಂದ ಆಗಮಿಸಿ ಗ್ರಾಮ ದೇವತೆಗೆ ಪೂಜೆ ಸಮರ್ಪಿಸಿದರು. ಆಗಮಿಸಿದ್ದ ನೂರಾರು ಭಕ್ತರಿಗೆ ಈ ಸಂದರ್ಭದಲ್ಲಿ ಅನ್ನ ದಾಸೋಹ ಏರ್ಪಡಿಸಲಾಗಿತ್ತು .