ಎಪಿಎಂಸಿ ಅಧ್ಯಕ್ಷರಾಗಿ ಧರ್ಮೇಗೌಡ ಆಯ್ಕೆ

13arsph1ep
Published on

ಅರಸೀಕೆರೆ: ಇಲ್ಲಿನ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜಾವಗಲ್ ಕ್ಷೇತ್ರದ ಧರ್ಮೇಗೌಡ ಆಯ್ಕೆಯಾದರು.


ಕೆಂಕೆರೆ ಕ್ಷೇತ್ರದ ಸದಸ್ಯ ಜಯರಾಂ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. 16 ಸದಸ್ಯ ಬಲದ ಎಪಿಎಂಸಿಯಲ್ಲಿ ಜೆಡಿಎಸ್ 8 ಹಾಗೂ ಕಾಂಗ್ರೆಸ್ 3 ಹಾಗೂ ಬಿಜೆಪಿ 5 ಸದಸ್ಯರ ಬಲ ಹೊಂದಿದೆ. ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಯಾಗಿ ಧರ್ಮೇಗೌಡ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನಾಗಸಮುದ್ರ ಶಶಿಧರ್ ನಾಮಪತ್ರ ಸಲ್ಲಿಸಿದರು.


ಬಳಿಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಧರ್ಮೇಗೌಡ 11 ಮತ ಗಳಿಸಿ ಅಧ್ಯಕ್ಷ ಗಾದಿ ಗಿಟ್ಟಿಸಿದರೆ, ಶಶಿಧರ್ 5 ಮತ ಪಡೆದರು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಎಪಿಎಂಸಿ ಕಾರ್ಯದರ್ಶಿ ಸಿದ್ದರಾಜು, ಉಪಾಧ್ಯಕ್ಷ ಟಿ.ಜಿ.ಕುಮಾರ್ ಇದ್ದರು.


ವಿಜೇತರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೂ ಗುಚ್ಛ ನೀಡಿ ಗೌರವಿಸಿದರು. ಜಿಪಂ ಸದಸ್ಯ ಬಿಳಿಚೌಡಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಹದೇವಪ್ಪ, ಜಯರಾಂ, ಚಂದ್ರಶೇಖರ್, ಅಜ್ಜಪ್ಪ ಸೇರಿ ನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net