ಅರಣ್ಯಸಿದ್ದೇಶ್ವರ ಮಲಕಾರಿಸಿದ್ದೇಶ್ವರ ಜಾತ್ರೆಗೆ ಅದ್ದೂರಿ ತೆರೆ

10mjr5
ಕೇರೂರ ಗ್ರಾಮದ ಅರಣ್ಯಸಿದ್ದೇಶ್ವರ& ಮಲಕಾರಿಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಭಕ್ತರು ಭಂಡಾರದಲ್ಲಿ ಮಿಂದೆದ್ದರು.
Published on

ಮಾಂಜರಿ: ಸಮೀಪದ ಕೇರೂರ ಗ್ರಾಮದ ಭಂಡಾರ ಜಾತ್ರೆ ಎಂದು ಪ್ರಸಿದಟಛಿವಾದ ಅರಣ್ಯಸಿದ್ದೇಶ್ವರ&ಮಲಕಾರಿಸಿದ್ದೇಶ್ವರ ದೇವರ ಜಾತ್ರೆಯ ಕೊನೆಯ ದಿನವಾದ ಸೋಮವಾರ ಭಕ್ತರು ಟನ್​ಗಟ್ಟಲೆಗೆ ಭಂಡಾರ ಅರ್ಪಿಸಿ ಭಕ್ತಿ ಮೆರೆದರು.

ನಿವ್ವಾಳಕಿ ಮತ್ತು ದೇವವಾಣಿ ಕಾರ್ಯಕ್ರಮದಲ್ಲಿ ಲಾಂತರ ಭಕ್ತರು ಭಂಡಾರದಲ್ಲಿ ಮಿಂದೆದ್ದರು. ಹಂಡ ಕುದರಿ, ಪುಂಡ ಅರಣ್ಯಸಿದ್ದಗ ಚಾಂಗಭಲೋ ದೇವವಾಣಿ ಸದ್ದಿನ ಮಧ್ಯೆ ಭಕ್ತರು ಸಂಭ್ರಮದಿಂದ ಹರಕೆ ತೀರಿಸಿದರು. ಅರಣ್ಯ ಸಿದ್ದೇಶ್ವರ ದೇವರ ಸನ್ನಿಧಿಗೆ ಗಡಿಭಾಗದ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಲಾಂತರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ದೇವರ ಪಲ್ಲಕ್ಕಿಗೆ ಭಂಡಾರ ಹಾಗೂ ಉತ್ತತ್ತಿ ಅರ್ಪಿಸಿದರು. ಮೂರು ದಿನಗಳ ಜಾತ್ರೆ ಸೋಮವಾರ ಶಾಂತಿಯುತವಾಗಿ ಮುಕ್ತಾಯಗೊಂಡಿತ್ತು.

ಜಾತ್ರಾ ಕಮಿಟಿಯ ಮಲ್ಲಿಕಾರ್ಜುನ ಪಾಟೀಲ, ವೀರೇಂದ್ರ ಪಾಟೀಲ, ವಿಠ್ಠಲ ವಾಳಕೆ, ಸಿದ್ರಾಮ ಗಡದೆ, ಬಾಲಗೌಡ ರೇಂದಾಳೆ, ಬಸವಾನಂದ ವಡೇರ, ರಾಮು ಜನಗೌಡ, ವಿಠ್ಠಲ ಬೆಕ್ಕೇರಿ, ಅಪ್ಪಾಸಾಹೇಬ ಬ್ಯಾಳಿ, ನಾಗುಗೌಡ ಪಾಟೀಲ, ಶಿವಾನಂದ ಸಂಕೇಶ್ವರಿ, ರವಿ ಪಾಟೀಲ, ಮಹೇಶ ಪಾಟೀಲ, ಸಿದ್ದು ನಾವಿ, ಸುರೇಶ ಬಾಡ್ಕರ, ಶಿವು ಪಾಟೀಲ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net