ಆರಂಭ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ

h17-Aarambha
Published on

ಹುಬ್ಬಳ್ಳಿ: ಜುಲೈ 7ರಂದು ಬಿಡುಗಡೆಯಾಗಿರುವ ಆರಂಭ ಕನ್ನಡ ಚಲನಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಿರ್ದೇಶಕ ಮಂಜುನಾಥ ಬಡಿಗೇರ ಹೇಳಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ವಾರ ಮಲ್ಟಿಪ್ಲೆಕ್ಸ್ (ಪಿವಿಆರ್)ನಲ್ಲಿ ಪ್ರದರ್ಶನ ಕಂಡಿದ್ದವು. 2ನೇ ವಾರ ಹುಬ್ಬಳ್ಳಿ, ಅಥಣಿ, ಬೈಲಹೊಂಗಲ ಹಾಗೂ ರಾಮದುರ್ಗದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. 3ನೇ ವಾರ ಗೋಕಾಕ, ಗದಗ, ಬಾಗಲಕೋಟ, ಹೊಸಪೇಟೆ ಹಾಗೂ ಕಲಬುರಗಿಯಲ್ಲಿ ಪ್ರದರ್ಶನಕ್ಕೆ ಚಿತ್ರ ಮಂದಿರಗಳು ಬುಕ್ ಆಗಿದೆ ಎಂದು ತಿಳಿಸಿದರು.

ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾವೊಂದು 2ನೇ ವಾರಕ್ಕೆ ಲಗ್ಗೆ ಇಟ್ಟು ಪ್ರದರ್ಶನ ಕಾಣುತ್ತಿರುವುದು ವಿರಳ ಸಂಗತಿ. ಇದು ನಮ್ಮ ಉತ್ಸಾಹ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಇನ್ನಉ ಉತ್ತಮ ಚಿತ್ರ ಮಾಡಲು ಪ್ರೇರಣೆ ಸಿಕ್ಕಂತಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net