

ಮೂಡಲಗಿ: ತಾಲೂಕಿನ ಅರಳಿಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇಂದ್ರ ಪುರಸತ ಪಿಎಂಶ್ರೀ ಶಾಲೆಯಾಗಿ ಪರಿವರ್ತನೆಗೊಳ್ಳಲಿದೆ. ಶೆಣಿಕ ವಲಯಕ್ಕೆ ಮತ್ತೊಂದು ಪಿಎಂಶ್ರೀ ದೊರೆತಂತಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ದೇಶದಲ್ಲಿನ ಗ್ರಾಮೀಣ ಶಾಲೆಗಳನ್ನು ಕೇಂದ್ರೀಯ ಶಾಲೆಗಳ ರೀತಿಯಲ್ಲಿ ಗುಣಮಟ್ಟದ ಶಿಣ ಒದಗಿಸಲು ಕೇಂದ್ರ ಸರ್ಕಾರದಿಂದ ಪಿಎಂಶ್ರೀ ಶಾಲೆ ಸ್ಥಾಪಿಸಲಾಗುತ್ತಿದ್ದು, ಮೂಡಲಗಿ ವಲಯದಲ್ಲಿ ಒಟ್ಟು 8 ಶಾಲೆಗಳಿವೆ. ಮೂಡಲಗಿ ವಲಯದಲ್ಲಿ ಶಾಸಕರ ಮಾದರಿ ಶಾಲೆ ಗುರ್ಲಾಪುರ, ಹುಣಶ್ಯಾಳ ಪಿಜಿ, ನಾಗನೂರ, ಕಲ್ಲೊಳ್ಳಿ, ಅರಬಾವಿ, ಮಲ್ಲಾಪುರ ಪಿಜಿ ಮತ್ತು ಮೆಳವಂಕಿ ಗ್ರಾಮಗಳಲ್ಲಿ ಶಾಲೆಗಳು ಆರಂಭವಾಗಿವೆ. ಇದೀಗ ಅರಳಿಮಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ ಹೊಸ ಸೇರ್ಪಡೆಯಾಗಲಿದೆ ಎಂದು ತಿಳಿಸಿದ್ದಾರೆ.