ಅರಳಿಕಟ್ಟಿಯವರ ಸಮಾಜಮುಖಿ ಕಾರ್ಯ ಇತರರಿಗೆ ಮಾದರಿ

Aralikatti's social work is a model for others
ಮುಧೋಳ ನಗರದ ಯಡಹಳ್ಳಿ ರಸ್ತೆಯ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುಧೋಳ ಅರಳಿಕಟ್ಟಿ ೌಂಡೇಶನ್ ಐದನೇ ವಾರ್ಷಿಕೋತ್ಸವ ಹಾಗೂ ಕಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ದಿ. ವಿ.ಎಚ್. ಅರಳಿಕಟ್ಟಿ ಕಷಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ, ಡಾ. ಟಿ.ವಿ. ಅರಳಿಕಟ್ಟಿ, ಎಂ.ಜಿ. ದಾಸರ, ಚಲನಚಿತ್ರ ನಟಿ ಗೀತಾ ಇತರರಿದ್ದರು.
Published on

ಮುಧೋಳ: ಕೋವಿಡ್‌ನಂತಹ ಸಂಕಷ್ಟದ ದಿನಗಳಲ್ಲಿ ಬಡವರಿಗೆ ನೆರವಾಗಲು ಆಕ್ಸಿಜನ್ ಸೌಲಭ್ಯ ಒದಗಿಸಿರುವುದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ಸಿಗುವಂತೆ ಮಾಡಿರುವ ಅರಳಿಕಟ್ಟಿ ಅವರ ಕಾರ್ಯ ಸಮಾಜಮುಖಿಯಾಗಿದ್ದು ಇತರರಿಗೆ ಮಾದರಿಯಾಗಿದೆ ಎಂದು ಬಹುಭಾಷಾ ಚಲನಚಿತ್ರ ಹಿರಿಯ ನಟಿ ಗೀತಾ ಹೇಳಿದರು.

ಯಡಹಳ್ಳಿ ರಸ್ತೆಯ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುಧೋಳ ಅರಳಿಕಟ್ಟಿ ೌಂಡೇಶನ್ ಐದನೇ ವಾರ್ಷಿಕೋತ್ಸವ ಹಾಗೂ ಕಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ದಿ. ವಿ.ಎಚ್. ಅರಳಿಕಟ್ಟಿ ಕಷಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಸಹಕಾರಿ, ಸಾಮಾಜಿಕ, ಕಷಿ, ಕ್ರೀಡೆ ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸಾಧನೆಗೆ ಒಳ್ಳೆಯ ಗುರಿ, ಉದ್ದೇಶ, ಪ್ರಾಮಾಣಿಕ ಪ್ರಯತ್ನ ಬೇಕು. ಅಂದಾಗ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಡಾ. ಟಿ.ವಿ. ಅರಳಕಟ್ಟಿ ಅವರ ಸಾಧನೆಯ ಹೆಜ್ಜೆ ಇತರರಿಗೆ ಮಾದರಿ ಎಂದು ಬಣ್ಣಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಅನ್ನದಾತರ ಶ್ರಮ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವ ಅರಳಿಕಟ್ಟಿ ಅವರ ಕಾರ್ಯ ಶ್ಲಾಘನೀಯ. ತಾಲೂಕು ವ್ಯಾಪ್ತಿಯ ಘಟಪ್ರಭಾ ನದಿಗೆ ಎಂಟು ಬ್ರಿಡ್ಜ್ ಕಂ ಬ್ಯಾರೇಜ್, ಹೆಸ್ಕಾಂ ಕೇಂದ್ರ ನಿರ್ಮಾಣ ಮಾಡಿದ್ದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ರೈತ ಪರ ಕಾರ್ಯಕ್ಕೆ ಸದಾ ನನ್ನ ಬೆಂಬಲವಿದೆ ಎಂದರು.

ಅರಳಿಕಟ್ಟಿ ೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಟಿ.ವಿ. ಅರಳಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದ ಬಡ, ಪ್ರತಿಭಾವಂತ, ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂಬ ಸದುದ್ದೇಶದಿಂದ ಶೈಕ್ಷಣಿಕ ಸಂಸ್ಥೆ ತೆರೆದಿದ್ದು, ವಿದ್ಯಾರ್ಥಿಗಳ ಪಾಲಕರು ಬೆಂಬಲ ಮತ್ತು ಸಹಕಾರ ನೀಡಿದ್ದಾರೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಎಲ್ಲರೂ ಬದುಕುತ್ತಾರೆ. ಆದರೆ ವಿಭಿನ್ನವಾಗಿ ಬದುಕಿ ಇತರರಿಗೆ ಮಾದರಿಯಾಗುವಂತಹ ಕೆಲಸ ಮಾಡುವವರು ವಿರಳ. ಪರೋಪಕಾರದ ಗುಣ ಹೊಂದಿರುವ ಹಾಗೂ ಉತ್ತಮ ವ್ಯಕ್ತಿತ್ವದ ಡಾ. ಅರಳಿಕಟ್ಟಿ ಅವರ ಕಾರ್ಯ ಶ್ಲಾಘನೀಯ ಎಂದರು.

ಯಡಹಳ್ಳಿ ಅಡವಿ ಸಿದ್ಧೇಶ್ವರ ಮಠದ ಚಂದ್ರಶೇಖರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಜಿ.ಪಂ. ಅಧ್ಯಕ್ಷ ಎಂ.ಎಲ್. ಕೆಂಪಲಿಂಗಣ್ಣವರ, ನಿವತ್ತ ಡಿಡಿಪಿಐ ಎಂ.ಜಿ. ದಾಸರ, ಕೊಣ್ಣೂರು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೊಣ್ಣೂರ, ಕಬ್ಬು ಬೆಳೆಗಾರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಿರೀಶಗೌಡಪಾಟೀಲ, ಉಪಾಧ್ಯಕ್ಷ ಅನಂತರಾವ ಘೋರ್ಪಡೆ, ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ಟಿ. ಅರಳಿಕಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ, ಕಾರ್ಯದರ್ಶಿ ವಿನಾಯಕ ಟಿ. ಅರಳಿಕಟ್ಟಿ, ವರ್ಷಾ ಘಾರಗೆ, ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಇದ್ದರು.

ಗಾಯಕರಾದ ಹೇಮಂತ ಕುಮಾರ, ಜಸ್ಕರಣ್ ಸಿಂಗ್ ಹಾಗೂ ನಟರಾಜ ಕಲಾ ತಂಡದಿಂದ ವಿಶೇಷ ಮನರಂಜನಾ ಕಾರ್ಯಕ್ರಮ ಜನಮನ ಸೂರೆಗೊಂಡಿತು.

ಪ್ರಶಸ್ತಿ ಪುರಸ್ಕೃತರು

ದಿ. ವಿ.ಎಚ್. ಅರಳಿಕಟ್ಟಿ ಕಷಿ ರತ್ನ ಪ್ರಶಸ್ತಿಗೆ ಕರಿಯಪ್ಪ ಹೂಗಾರ (ರಂಜಣಗಿ), ರಾಜಶೇಖರ ಅಂಗಡಿ (ಮುಧೋಳ), ಪದ್ಮಾವತಿ ದುಂಡಪ್ಪ ದಾಸರಡ್ಡಿ (ಮಾಚಕನೂರ), ಲಕ್ಷ್ಮಿ ಸಂಗಣ್ಣವರ (ಶಿರೋಳ), ಮಹೇಶ ಹನಮಂತ (ಯಡಹಳ್ಳಿ) ಭಾಜನರಾಗಿ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದರು.

ಮಳೆಗಾಲ ಮುಗಿದ ಬಳಿಕ ‘ರನ್ನ ವೈಭವ ಸಾಂಸ್ಕೃತಿಕ ಹಬ್ಬ’ ಹಮ್ಮಿಕೊಳ್ಳಲಾಗುವುದು. ಹಲವಾರು ವರ್ಷಗಳಿಂದ ಕಾಯುತ್ತಿರುವ ಈ ಭಾಗದ ಜನರಿಗೆ ಹಬ್ಬದ ವಾತಾವರಣ ಉಣಬಡಿಸಲು ಸಿದ್ಧರಾಗೋಣ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು.
ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net