ಅರಳಿಕಟ್ಟಿ ಸಮಾಜಮುಖಿ ಕಾರ್ಯ ಮಾದರಿ

Aralikatti is a model of social work.
ಮುಧೋಳ ನಗರದ ಯಡಹಳ್ಳಿ ರಸ್ತೆಯ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುಧೋಳ ಅರಳಿಕಟ್ಟಿ ೌಂಡೇಷನ್ ಐದನೇ ವಾರ್ಷಿಕೋತ್ಸವದಲ್ಲಿ ಕೃಷಿ ಸಾಧಕರಿಗೆ ದಿ. ವಿ.ಎಚ್. ಅರಳಿಕಟ್ಟಿ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಎಸ್ .ಆರ್.ಪಾಟೀಲ, ಡಾ. ತಿಮ್ಮಣ್ಣ ಅರಳಿಕಟ್ಟಿ, ಸಂಗಮೇಶ ನಿರಾಣಿ, ಚಲನಚಿತ್ರ ನಟಿ ಭವ್ಯಾ ಇತರರಿದ್ದರು.
Published on

ಮುಧೋಳ: ಕೋವಿಡ್‌ನಂತಹ ಸಂಕಷ್ಟದ ದಿನಗಳಲ್ಲಿ ಬಡವರಿಗೆ ನೆರವಾಗಲು ಆಕ್ಸಿಜನ್ ಸೌಲಭ್ಯ ಒದಗಿಸಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ಸಿಗುವಂತೆ ಮಾಡಿರುವ ಅರಳಿಕಟ್ಟಿ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಬಹುಭಾಷಾ ಚಲನಚಿತ್ರನಟಿ ಭವ್ಯಾ ಹೇಳಿದರು.

ಯಡಹಳ್ಳಿ ರಸ್ತೆಯ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುಧೋಳ ಅರಳಿಕಟ್ಟಿ ಫೌಂಡೇಷನ್ ಆರನೇ ವಾರ್ಷಿಕೋತ್ಸವ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ದಿ. ವಿ.ಎಚ್. ಅರಳಿಕಟ್ಟಿ ಕೃಷಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಧನೆಗೆ ಒಳ್ಳೆಯ ಗುರಿ, ಉದ್ದೇಶ, ಪ್ರಾಮಾಣಿಕ ಪ್ರಯತ್ನ ಬೇಕು. ಅಂದಾಗ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಡಾ. ಟಿ.ವಿ. ಅರಳಕಟ್ಟಿ ಅವರ ಸಾಧನೆಯ ಹೆಜ್ಜೆ ಇತರರಿಗೆ ಮಾದರಿ ಎಂದು ಬಣ್ಣಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಅನ್ನದಾತರ ಶ್ರಮ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವ ಅರಳಿಕಟ್ಟಿ ಅವರ ಕಾರ್ಯ ಶ್ಲಾಘನೀಯ. ತಾಲೂಕು ವ್ಯಾಪ್ತಿಯಲ್ಲಿ ರೈತ ಪರ ಕಾರ್ಯಕ್ಕೆ ಸದಾ ನನ್ನ ಬೆಂಬಲವಿದೆ ಎಂದರು.

ಅರಳಿಕಟ್ಟಿ ೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಟಿ.ವಿ. ಅರಳಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದ ಬಡ ಪ್ರತಿಭಾವಂತ ಹಾಗೂ ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂಬ ಸದುದ್ದೇಶದಿಂದ ಶೈಕ್ಷಣಿಕ ಸಂಸ್ಥೆ ತೆರೆದಿದ್ದು, ಪಾಲಕರು ಬೆಂಬಲ ಮತ್ತು ಸಹಕಾರ ನೀಡಿದ್ದಾರೆ ಎಂದರು.

ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ಎಲ್ಲರೂ ಬದುಕುತ್ತಾರೆ. ವಿಭಿನ್ನವಾಗಿ ಬದುಕಿ ಇತರರಿಗೆ ಮಾದರಿಯಾಗುವಂತಹ ಕೆಲಸ ಮಾಡುವವರು ವಿರಳ. ಪರೋಪಕಾರದ ಗುಣ ಹೊಂದಿರುವ ಹಾಗೂ ಉತ್ತಮ ವ್ಯಕ್ತಿತ್ವದ ಡಾ. ಅರಳಿಕಟ್ಟಿ ಅವರ ಕಾರ್ಯ ಶ್ಲಾಘನೀಯ ಎಂದರು.

ನಿರಾಣಿ ಸಮೂಹ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ಜಿ.ಪಂ ಮಾಜಿ ಅಧ್ಯಕ್ಷ ಎಂ.ಎಲ್. ಕೆಂಪಲಿಂಗಣ್ಣವರ, ಕಬ್ಬು ಬೆಳೆಗಾರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಿರೀಶಗೌಡ ಪಾಟೀಲ, ಉಪಾಧ್ಯಕ್ಷ ಅನಂತರಾವ ಘೋರ್ಪಡೆ, ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ಟಿ. ಅರಳಿಕಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ, ಕಾರ್ಯದರ್ಶಿ ವಿನಾಯಕ ಟಿ. ಅರಳಿಕಟ್ಟಿ, ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಇದ್ದರು. ನಟರಾಜ ಕಲಾ ತಂಡದಿಂದ ವಿಶೇಷ ಮನರಂಜನಾ ಕಾರ್ಯಕ್ರಮ ಜನಮನಸೂರೆಗೊಂಡಿತು.

ಈ ಭಾಗದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಚಿಕಿತ್ಸೆ ಜೊತೆಗೆ ರೈತರಿಗೆ ಉಚಿತ ವಿಮೆ ನೀಡಿ ಸಹಕಾರ, ಶಿಕ್ಷಣ,ಆರೋಗ್ಯ ಹಾಗೂ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಡಾ.ಅರಳಿಕಟ್ಟಿ ಕಾರ್ಯ ಸ್ಮರಣೀಯ.  -ನಾರಾಯಣ ಭರಮನಿ ಡಿಸಿಪಿ ಬೆಳಗಾವಿ

ಪ್ರಶಸ್ತಿ ಪುರಸ್ಕೃತರು:

ದಿ. ವಿ.ಎಚ್. ಅರಳಿಕಟ್ಟಿ ಕೃಷಿ ರತ್ನ ಪ್ರಶಸ್ತಿಗೆ ರಾಮಣ್ಣ ಸಂಕ್ರಟ್ಟಿ(ಬೆಳಗಲಿ), ಶ್ರೀಕಾಂತ ಕುಂಬಾರ(ಮುಗಳಖೋಡ), ಪ್ರೇಮಾ ಬೋರಡ್ಡಿ(ಉತ್ತೂರ), ಸೋಮು ಹುಲ್ಯಾಳ (ಇಂಗಳಗಿ), ಹನುಮಂತ ಗಿಡ್ಡಪ್ಪನವರ (ಗುಲಗಾಲಜಂಬಗಿ) ಭಾಜನರಾಗಿ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net