

ಹುಬ್ಬಳ್ಳಿ: ತಾಲೂಕಿನ ಬು. ಅರಳಿಕಟ್ಟಿಯಲ್ಲಿ ಗ್ರಾಮದೇವಿ ಶ್ರೀ ದ್ಯಾಮವ್ವದೇವಿ, ಶ್ರೀಉಡಚೇಶ್ವರಿದೇವಿ, ಶ್ರೀಮರಿಯಮ್ಮದೇವಿ ಜಾತ್ರಾ ಮಹೋತ್ಸವವು ಏ. 3ರಿಂದ 9ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಏ. 3ರಂದು ಗ್ರಾಮದೇವಿಯ ವಿವಾಹ ಮಹೋತ್ಸವವು ಹನುಮಾಪುರದ ಕಾಳಿಕಾಂಬಾ ಹಿರೇಮಠದ ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ಹಾಗೂ ಹೋಮ, ಹವನ, ಇತರೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಧುಲಿಕಾ, ಮಾಲತೇಶ ಭಟ್ಟ, ಗಣೇಶಭಟ್ಟ ನರಗುಂದ, ಪ್ರಭಾವತಿ, ಪ್ರಕಾಶ ಕುಲಕಣಿರ್, ವರನ ಪರವಾಗಿ ಗ್ರಾಮದ ಗೌಡರ ಮನೆತನದವರು, ಮೇಟಿ ವಕ್ಕಲು ಮನೆತನದ ಹೊಸಮನಿ ಬಂಧುಗಳು, ಬಡಿಗೇರ ಮನೆತನ, ಗ್ರಾಮದ ಎಲ್ಲ ದೇವಸ್ಥಾನಗಳ ಅರ್ಚಕರು, ಮಠಾಧೀಶರು, ಜೋಗುತಿಯರು, ಗೊರವಜ್ಜನವರು, ಗ್ರಾಮದ ಗುರು ಹಿರಿಯರು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಭಕ್ತರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಗ್ರಾಮದ ದೇವಸ್ಥಾನದಿಂದ ದೇವಿಯ ಭವ್ಯ ಮೆರವಣಿಗೆ ಪ್ರಾರಂಭವಾಗಿ ವಿವಿಧ ಕಲಾಮೇಳಗಳಾದ ಬ್ಯಾಂಡ್, ಜಗ್ಗಲಗಿ, ಶಹನಾಯಿ ವಾದನ, ಡೊಳ್ಳಿನ ಮೇಳ, ಮಂಗಳೂರಿನ ಚಂಡೆವಾದ್ಯಗಳೊಂದಿಗೆ ಚೌಕಿ ಮನೆಯಲ್ಲಿ ಪ್ರತಿಷ್ಠಾಪನೆಗೊಂಡು ಮಂಗಳಾರುತಿ ಜರುಗಲಿದೆ.
ಏ. 4ರಂದು ಬೆಳಗ್ಗೆ 8ಕ್ಕೆ ಗ್ರಾಮದೇವತೆಯ ದೇವತಾ ಪ್ರತಿಷ್ಠಾಪನೆ, ಪಾರಾಯಣ, ಚಂಡಿಹೋಮ, ಕುಂಕುಮಾರ್ಚನೆ ನಂತರ ತ್ರಿವಿಧ ದಾಸೋಹಿ ಕಲ್ಯಾಣಪುರಮಠದ ಶ್ರೀ ಬಸವಣ್ಣಜ್ಜನವರಿಂದ ದೇವಿ ಉಪದೇಶಾಮೃತ ನಡೆಯಲಿದೆ. ಹೆಣ್ಣು ಕುಣಿತದ ನೃತ್ಯ ದೊಡ್ಡಾಟ ಪ್ರದರ್ಶನವಿದೆ.
ಏ. 5ರಂದು ಬೆಳಗ್ಗೆ 8ಕ್ಕೆ ಚಂಡಿಹೋಮ ಪೂರ್ಣಾಹುತಿ, ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರ ಮುಕ್ತಿಮನಿ ಶಿವಾಚಾರ್ಯ ಸ್ವಾಮೀಜಿಗಳಿಂದ ದೇವಿಯ ಉಪದೇಶಾಮೃತ ನಡೆಯಲಿದೆ.
ಏ. 6ರಂದು ಕಲಾದಗಿ ಪಂಚಗ್ರಹ ಹಿರೇಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳಿಂದ ಉಪದೇಶಾಮೃತ, ಶ್ರೀ ಅಲ್ಲಿಕೇರಿ ಬಸವೇಶ್ವರ ಸಾಂಸತಿಕ ಹಾಗೂ ಕ್ರೀಡಾ ಯುವ ಸಂದಿಂದ ಜೋಗತಿ ನೃತ್ಯ ಹಾಗೂ ಜಾನಪದ ಕಾರ್ಯಕ್ರಮ.
ಏ. 7ರಂದು ಹಾವೇರಿ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿಗಳಿಂದ ಉಪದೇಶಾಮೃತ, ಏ. 8ರಂದು ಅಮಾವಾಸ್ಯೆ.
ಏ. 9ರಂದು ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಗ್ರಾಮದೇವಿ ಪುನರ್ ಪ್ರತಿಷ್ಠಾಪನೆ, ಪುರೋಹಿತರಿಂದ ಹೋಮ ಪೂರ್ಣಾವತಿ ಮಹಾರುದ್ರಾಭಿಷೇಕ, ಬಿಲ್ವಾರ್ಚಣೆ, ರಾಜೋಪಚಾರ ಪೂರ್ವಕ ಮಹಾಪೂಜೆ ಉಡಿ ತುಂಬುವ ಕಾರ್ಯಕ್ರಮ, ಸಂಜೆ 4ಕ್ಕೆ ಶ್ರೀ ದೊಡ್ಡಬಸವೇಶ್ವರ ಜಾತ್ರಾ ಮಹೋತ್ಸವ ಮಹಿಳೆಯರಿಂದ ರಥೋತ್ಸವ ಜರುಗಲಿದೆ.
ಏ. 10ರಂದು ಕಡುಬಿನ ಕಾಳಗ, ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವ ಎಂದು ಪ್ರಕಟಣೆ ತಿಳಿಸಿದೆ.