ಕೆರೆಯಲ್ಲಿ ಮುಳುಗಿದ್ದ ಇನ್ನೊಂದು ಶವ ಪತ್ತೆ

Swimm
Published on

 ಅರಕಲಗೂಡು: ತಾಲೂಕಿನ ಮಣಜೂರು ಕೆರೆಯಲ್ಲಿ ಮುಳುಗಿದ್ದ ವ್ಯಕ್ತಿಯ ಶವ ಭಾನುವಾರ ಪತ್ತೆಯಾಗಿದೆ.ಕೆರೆಯಲ್ಲಿ ಹಸುವಿಗೆ ನೀರು ಕುಡಿಸಲು ತೆರಳಿದ್ದಾಗ ಶನಿವಾರ ಇಬ್ಬರು ನೀರು ಪಾಲಾಗಿದ್ದರು. ರವಿ ಎಂಬವರ ಮೃತದೇಹ ಶನಿವಾರವೇ ಅಗ್ನಿ ಶಾಮಕ ಸಿಬ್ಬಂದಿಗೆ ದೊರಕಿತ್ತು. ಮತ್ತೊಬ್ಬ ಮೃತ ಲಕ್ಷ್ಮಣ (55)ಅವರ ಶವಕ್ಕಾಗಿ ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರೂ ಶನಿವಾರ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಗ್ಗೆ ಸತತ ಕಾರ್ಯಾಚರಣೆ ನಡೆಸಿ, ನೆಲ ಕಚ್ಚಿದ್ದ ಲಕ್ಷ್ಮಣ ಮೃತ ದೇಹ ಹೊರ ತೆಗೆಯಲಾಯಿತು. ಅರಕಗಲೂಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ನೀಡಲಾಯಿತು. ಈ ಸಂದರ್ಭ ಮೃತರ ಕುಟುಂಬದವರ ದುಃಖ, ರೋದನೆ ಮುಗಿಲು ಮುಟ್ಟಿತ್ತು. ಶಾಸಕ ಎ. ಮಂಜು ಆಸ್ಪತ್ರೆಗೆ ಭೇಟಿ ನೀಡಿ ಮೃತ

ಲಕ್ಷ್ಮಣ ಅವರ ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಕುಟುಂಬದವರಿಗೆ ಸಾಂತ್ವನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net