

ಬಂಟ್ವಾಳ: ಅರಳ ನವಶಕ್ತಿ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ವಾರ್ಷಿಕೋತ್ಸವದ ಅಂಗವಾಗಿ ಕ್ರೀಡಾಕೂಟ ಭಾನುವಾರ ನಡೆಯಿತು. ಮುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಆಳ್ವ ಕಡೆಗುಂಡ್ಯ ಉದ್ಘಾಟಿಸಿದರು.
ಅರಳ ಪಂಚಾಯಿತಿ ಸದಸ್ಯ ಲಕ್ಷ್ಮೀಧರ ಶೆಟ್ಟಿ ಮಧ್ಯಾಳ, ನವಶಕ್ತಿ ಯುವಕ ಮಂಡಲದ ಸ್ಥಾಪಕ ಕಾರ್ಯದರ್ಶಿ ಜಗದೀಶ್ ಆಳ್ವ ಅಗ್ಗೊಂಡೆ, ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ದೊಂಬಯ ಬಿ.ಅರಳ, ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ರಂಜನ್ ಕುಮಾರ್ ಶೆಟ್ಟಿ, ಬಿಜೆಪಿ ಅರಳ ಶಕ್ತಿಕೇಂದ್ರದ ಸಂಚಾಲಕ ಸುಕುಮಾರ ಶೆಟ್ಟಿ, ನವಶಕ್ತಿ ಮಹಿಳಾ ಮಂಡಲದ ಅಧ್ಯಕ್ಷೆ ಅಶ್ವಿತಾ ಪೂಜಾರಿ, ನವಶಕ್ತಿ ಯುವಕ ಮಂಡಲ ಕಾರ್ಯದರ್ಶಿ ದೇವದಾಸ್ ಪೂಜಾರಿ ಅಂಬರ್ದೊಟ್ಟು, ಕ್ರೀಡಾ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ತಡ್ಯಾಲ, ಅರಳ ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ ಶೆಟ್ಟಿ ಸಂಘಬೆಟ್ಟು, ಯೋಗೀಶ್ ಕಾಯರ್ದಡಿ ಮತ್ತಿತರರಿದ್ದರು. ಉಮೇಶ್ ಡಿ.ಎಂ. ನಿರೂಪಿಸಿದರು.