ಆಕಸ್ಮಿಕ ಬೆಂಕಿ ಬಿದ್ದು ಹೊತ್ತಿ ಉರಿದ ಆಲದ ಮರ

6ark3
Published on

ಅರಕಲಗೂಡು: ತಾಲೂಕಿನ ವಡ್ವಾನಹೊಸಹಳ್ಳಿ ಗೇಟ್ ಬಳಿ ಹಾಸನ-ಮಡಿಕೇರಿ ರಸ್ತೆ ಬದಿ ಬೃಹತ್ ಆಲದ ಮರಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.


ಬುಧವಾರ ಸಂಜೆ ಇದ್ದಕ್ಕಿದ್ದಂತೆ ಮರಕ್ಕೆ ಬೆಂಕಿ ಕಾಣಿಸಿಕೊಂಡು ಸುಮಾರು 2 ತಾಸು ಹೊತ್ತಿ ಉರಿದು ಜನರಲ್ಲಿ ಭಯ ಹುಟ್ಟಿಸಿತು. ರಸ್ತೆಯ ಪಕ್ಕದಲ್ಲಿಯೇ ಬೃಹತ್ ಗಾತ್ರದ ಮರದಲ್ಲಿ ಬೆಂಕಿ ಕೆನ್ನಾಲಿಗೆ ಎತ್ತರಕ್ಕೆ ಚಾಚುತ್ತಿದ್ದುದ್ದನ್ನು ನೋಡಲು ನೂರಾರು ಜನರು ಜಮಾಯಿಸಿದ್ದರು. ಮರದ ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ಲೈನ್‌ನಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು.


ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕೊಣನೂರು ಪೊಲೀಸರು ಜನರು ಮತ್ತು ವಾಹನಗಳನ್ನು ತಡೆಯಲು ಶ್ರಮ ವಹಿಸಿದರು. ಸ್ಥಳಕ್ಕೆ ಧಾವಿಸಿದ ಅರಕಲಗೂಡು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net