ಹೈಟೆಕ್ ಶಾಲೆಯಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ!

WhatsApp Image 2021-03-20 at 8.14.40 PM
Published on

ಅರಕಲಗೂಡು: ತಾಲೂಕಿನ ಜೆ.ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ಶನಿವಾರ ರಾತ್ರಿ ವಾಸ್ತವ್ಯ ಹೂಡಿದರು.

ರಾಮನಾಥಪುರ ಹೋಬಳಿ ಹಂಪಾಪುರದಲ್ಲಿ ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮ ಮುಕ್ತಾಗೊಂಡ ನಂತರ ರಾತ್ರಿ ನಡೆಸುವ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಹೈಟೆಕ್ ಸೌಕರ್ಯಗಳನ್ನೆಲ್ಲ ಹಾಸು ಹೊದ್ದಿರುವ ಶಾಲೆಯಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ವಾಸ್ತವ್ಯ ಮಾಡಿದರು.

ಇದಕ್ಕೂ ಮುನ್ನ ಶಾಲೆಯ ಬಯಲು ರಂಗ ಮಂಟಪದಲ್ಲಿ ಆರ್. ಗಿರೀಶ್ ಅವರು ಶಾಸಕ ಎ.ಟಿ. ರಾಮಸ್ವಾಮಿ, ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ಜಿಪಂ ಸದಸ್ಯ ಬರಗೂರು ರವಿ ಅವರೊಂದಿಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಾರತ ಭಾಗ್ಯವಿದಾತ ಎಲ್.ಇ.ಡಿ. ಪರದೆ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ವೀಕ್ಷಿಸಿದರು.

ಪುನರ್ವಸತಿ ಗ್ರಾಮವಾದ ಜೆ.ಹೊಸಹಳ್ಳಿಯಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ 85 ಲಕ್ಷ ರೂ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿ ರುವ ಶಾಲೆ ಸ್ಥಾಪಿಸಲಾಗಿದೆ. ತಾಲೂಕು ಆಡಳಿತ ಇದೇ ಶಾಲೆ ಆಯ್ಕೆ ಮಾಡಿದ್ದು ಜಿಲ್ಲಾಧಿಕಾರಿಗಳು ವಾಸ್ತವ್ಯ ನಡೆಸಿರುವುದು ಜನರ ಹುಬ್ಬೇರುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net