ಗಾಢ ನಿದ್ರೆಯಲ್ಲಿದ್ದಾಗ ಕುಸಿದ ಮನೆ ಛಾವಣಿ: ಪ್ರಣಾಪಾಯದಿಂದ ಐವರು ಪಾರು

WhatsApp Image 2021-03-22 at 1.04.46 PM
Published on

ಅರಕಲಗೂಡು: ತಾಲೂಕಿನ ಮಣಜೂರು ಗ್ರಾಮದಲ್ಲಿ ವಾಸದ ಮನೆ ಛಾವಣಿ ಕುಸಿದು ಕುಟುಂಬಸ್ಥರು ಜೀವಾಪಾಯದಿಂದ ಪಾರಾದ ಘಟನೆ ನಡೆದಿದ್ದು ಸೋಮವಾರ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಣಜೂರು ಗ್ರಾಮದ ದಿ. ತಿಮ್ಮೇಗೌಡರ ಮಗ ರವಿಶಂಕರ್ ಸೇರಿದ ವಾಸದ ಮನೆ ಕುಸಿದಿದೆ. ರವಿಶಂಕರ್ ಅವರು ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದ ವೇಳೆ ಶನಿವಾರ ಮಧ್ಯರಾತ್ರಿ ವೇಳೆ ಛಾವಣಿ ಕುಸಿದು ಅಟ್ಟದ ಮೇಲೆ ಬಿದ್ದಿದೆ.

ಅದೃಷ್ಟವಶಾತ್‌ನಿದ್ರಿಸುತ್ತಿದ್ದ ಐವರು ಎದ್ದು ಹೊರ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಭಾನುವಾರ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಇಂದು ಗ್ರಾಮಕ್ಕೆ ಭೇಟಿ ನೀಡಿದ ಅಧ್ಯಕ್ಷ ರಂಗಸ್ವಾಮಿ ಅವರು ಕುಟುಂಬಸ್ಥರಿಗೆ ಸಾಂತ್ವಾನ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net