ತಹಸಿಲ್ ಕಚೇರಿಯಲ್ಲಿ ಸಿಬ್ಬಂದಿ ಸೇವೆಗೆ ಲಭ್ಯವಾಗಲಿ

Untitled design (13)
Published on

ಅರಕೇರಾ: ತಹಸಿಲ್ ಕಚೇರಿಯಲ್ಲಿ ಸಿಬ್ಬಂದಿ ಗೈರಾಗಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಕಚೇರಿಗೆ ಮನವಿ ಪತ್ರ ಅಂಟಿಸಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ತಾಲೂಕು ಸಂಚಾಲಕ ನಾಗರಾಜ ದೇವರಮನಿ ಮಾತನಾಡಿ, ಮನವಿ ಸಲ್ಲಿಸಲು ಹೋದಾಗ ಸ್ವೀಕರಿಸಲು ಕರ್ತವ್ಯದಲ್ಲಿ ಯಾರೂ ಇರಲಿಲ್ಲ. ಹಾಗೂ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಯ್ದರೂ ಆಗಮಿಸಿರಲಿಲ್ಲ. ತಹಸೀಲ್ದಾರ್, ಉಪ ತಹಸೀಲ್ದಾರ್ ಸೇರಿ ಯಾವೊಬ್ಬ ಸಿಬ್ಬಂದಿ ಸಿಗದಿದ್ದರಿಂದ ಕಚೇರಿ ಗೋಡೆಗೆ ಮನವಿ ಪತ್ರ ಅಂಟಿಸಳಾಗಿದೆ. ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಸಾರ್ವಜನಿಕರ ಸೇವೆಗೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net