ವಿದ್ಯಾರ್ಥಿಗಳಿಗೆ ಕೌಶಲಗಳ ಕಲಿಸಿ

Ark-1
ಅರಕೇರಾದ ಸರ್ಕಾರಿ ಮಾಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ಎಫ್‌ಎಲ್‌ಎನ್ ತರಬೇತಿ ಕಾರ್ಯಾಗಾರವನ್ನು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಉದ್ಘಾಟಿಸಿದರು. ಸಿಆರ್‌ಪಿಗಳಾದ ಬಸಯ್ಯ ಸಾತಲ್, ಬಸವರಾಜ, ಕೇಶಾಪುರ, ರಘು ಕೆ.ಎನ್, ಬಾಲಾಜಿ ನಾಯ್ಕ, ಅಜೀಂ ಪ್ರೇಮ್‌ಜೀ ಫೌಂಡೇಷನ್ ಮೇಲ್ವಿಚಾರಕ ರಮೇಶ್ ಕುಲಕರ್ಣಿ, ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಇದ್ದರು.
Published on

ಅರಕೇರಾ: ಮೂಲ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವು ಶೈಕ್ಷಣಿಕ ಪರಿಕಲ್ಪನೆಯಾಗಿದ್ದು, ಓದುವುದು, ಬರೆಯುವುದು ಮತ್ತು ಗಣಿತದ ಮೂಲ ಕೌಶಲಗಳನ್ನು ಮಕ್ಕಳಿಗೆ ಕಲಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೋಬಳಿ ಮಟ್ಟದ 3 ರಿಂದ 5ನೇ ತರಗತಿಗಳಿಗೆ ಕನ್ನಡ ಮತ್ತು ಗಣಿತ ವಿಷಯಗಳ ಶಿಕ್ಷಕರ ಎಫ್‌ಎಲ್‌ಎನ್ ತರಬೇತಿ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಮೂಲ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಚಟುವಟಿಕೆಗಳು ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಉತ್ತಮ ಬುನಾದಿ ಹಾಕಲು ಸಹಾಯ ಮಾಡುತ್ತದೆ ಎಂದರು.

ಅಕ್ಷರಗಳನ್ನು ಗುರುತಿಸುವುದು, ಪದಗಳು ಮತ್ತು ವಾಕ್ಯಗಳನ್ನು ಓದುವುದು, ಸರಳ ಗಣಿತದ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಆಕಾರಗಳನ್ನು ಗುರುತಿಸುವುದು, ಕಥೆಗಳನ್ನು ಹೇಳುವುದು ಮತ್ತು ಕೇಳುವುದು, ವಿಷಯಗಳ ಬಗ್ಗೆ ಚರ್ಚಿಸುವುದು ಮತ್ತು ಪ್ರಶ್ನೆಗಳನ್ನು ಕೇಳುವ ಚಟುವಟಿಕೆಗಳು ಉತ್ತರಗಳನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ತರಬೇತಿ ಕಾರ್ಯಗಾರವನ್ನು ಸಂಪೂರ್ಣವಾಗಿ ಆಲಿಸಿ ಮಕ್ಕಳಲ್ಲಿ ಕೌಶಲಗಳನ್ನು ಬಿತ್ತುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net