ಅರಕೇರ ತಾಲೂಕು ಕೇಂದ್ರವಾಗಿ ಘೋಷಣೆ, ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

030920 Arakera Taluku Declaration BJP Celebration
ಸಚಿವ ಸಂಪುಟ ಸಭೆಯಲ್ಲಿ ಅರಕೇರವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲು ಸರ್ಕಾರದಿಂದ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
Published on

ಅರಕೇರಾ: ಸಚಿವ ಸಂಪುಟ ಸಭೆಯಲ್ಲಿ ಅರಕೇರವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲು ಸರ್ಕಾರದಿಂದ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಮಾಜಿ ಸಚಿವ ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಶಾಸಕ ಕೆ.ಶಿವನಗೌಡ ನಾಯಕ ನಿವಾಸ ಹಾಗೂ ಗ್ರಾಮದ ಮುಖ್ಯರಸ್ತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಶಾಸಕ ಶಿವನಗೌಡ ನಾಯಕಗೆ ಜೈಕಾರ ಹಾಕಿ ನಂತರ ಶ್ರೀ ಭಾಗಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಿಜೆಪಿ ಹಿರಿಯ ಮುಖಂಡ ಅನಂತ ರಾಜಾ ನಾಯಕ, ಸತ್ಯನಾರಾಯಣ ನಾಯಕ, ಸೀತಣ್ಣ ನಾಯಕ, ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಪೈಕಾರ, ಡಾ.ಎಚ್.ಎ. ನಾಡಗೌಡ, ಗೋಪಾಲಕೃಷ್ಣ ಮೇಟಿ, ಶಿವಕುಮಾರ ಬಳೆ, ಚಂದ್ರಶೇಖರ್ ಶೆಟ್ಟಿ, ಜಾವೀದ್ ಚಿಂಚೋಳಿಕರ್, ವಿಶ್ವನಾಥ ಹೊಸಮನಿ, ಬಸವರಾಜ ಗಾಣದಾಳ, ಭಗವಂತರಾಯ ನಾಯಕ ಜುಟಮರಡಿ, ಡಾ.ಶಿವರಾಜ ನಾಡಗೌಡ, ಆಂಜನೇಯ ದಳವಾಯಿ ಮಲ್ಲಾಪುರ ಸೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net