ಟೈಲರ್ಸ್‌ ಕ್ಷೇಮಾಭಿವೃದ್ದಿ ಮಂಡಳಿ ಸ್ಥಾಪನೆಯಾಗಲಿ

07 Arakera Photo 02 (1)
ಅರಕೇರಾದಲ್ಲಿ ರಾಜ್ಯ ಟೈಲರ್ಸ್‌ ಅಸೋಸಿಯೇಷನ್, ಹೋಬಳಿ ಘಟಕದಿಂದ ಏರ್ಪಡಿಸಿದ್ದ ಟೈಲರ್ಸ್‌ ಸಂಸ್ಥಾಪನಾ ದಿನವನ್ನು ತಾಲೂಕು ಅಧ್ಯಕ್ಷ ಖಾಜಾ ಹುಸೇನ್ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಹೋಬಳಿ ಘಟಕದ ಅಧ್ಯಕ್ಷ ಮನ್ಸೂರ್, ಗೌರವಾಧ್ಯಕ್ಷ ಸಲೀಂ ಕರ್ನೂಲ್, ಪದಾಧಿಕಾರಿಗಳಾದ ಖಾಜಾ ಹುಸೇನ್, ರಾಜ ಮಹ್ಮದ್, ಖಾದರ್ ಸೀಕಲಗಾರ್, ಮಹ್ಮದ್ ರಫಿ, ಮಲ್ಲಿಕಾರ್ಜುನ, ರಫಿ, ಹಸನ್ ಮಾಸ್ಟರ್, ಸಮೀರ್, ವಾಸಿಮ್ ಇತರರಿದ್ದರು.
Published on

ಅರಕೇರಾ: ಇಂದಿನ ತುಟ್ಟಿ ದುನಿಯಾದಲ್ಲಿ ಟೈಲರ್‌ಗಳು ಬದುಕು ನಡೆಸುವುದು ದುಸ್ತರವಾಗಿದೆ ಎಂದು ತಾಲೂಕು ಅಧ್ಯಕ್ಷ ಖಾಜಾ ಹುಸೇನ್ ಹೇಳಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಷನ್, ಹೋಬಳಿ ಘಟಕದಿಂದ ಏರ್ಪಡಿಸಿದ್ದ ಟೈಲರ್ಸ್‌ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಟೈಲರ್ ವೃತ್ತಿ ನಂಬಿ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟೈಲರ್ಸ್‌ ಕ್ಷೇಮಾಭಿವೃದ್ದಿ ಮಂಡಳಿ ಸ್ಥಾಪಿಸುವಂತೆ 25 ವರ್ಷಗಳಿಂದ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಸರ್ಕಾರ ನೀಡುತ್ತಿರುವ ಶಿಷ್ಯ ವೇತನ ಇನ್ನೂ ಹೆಚ್ಚಿಸಬೇಕು. ಒಗ್ಗಟ್ಟಿನ ಮಂತ್ರದಿಂದ ಮಾತ್ರ ನಮ್ಮ ಹಕ್ಕೊತ್ತಾಯಗಳು ಈಡೇರುತ್ತವೆ. ಅನೇಕ ಮಹಿಳಾ ಟೈಲರ್‌ಗಳು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಇವರಿಗೆ ವಿಶೇಷ ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮಕ್ಕೂ ಮೊದಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಟೈಲರ್ಸ್‌ ಅಸೋಸಿಯೇಷನ್, ಹೋಬಳಿ ಘಟಕದಿಂದ ಹಣ್ಣು, ಬ್ರೆಡ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net