ಶಾಲೆಗಳ ಅಭಿವೃದ್ಧಿಗೆ ಎಸ್ಡಿಎಂಸಿ ಸಹಕಾರಿ - ಬಿಆರ್‌ಪಿ ಶಿವಕುಮಾರ ನಾಡಗೌಡ ಅಭಿಪ್ರಾಯ

260222 Arakera Zone Level SDMC Workshop
ಅರಕೇರಾ ಸಮೀಪದ ಶಿವಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಲಯ ಮಟ್ಟದ ಎಸ್ಡಿಎಂಸಿ ಕಾರ್ಯಾಗಾರದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶರಣಬಸವ ಆಲಂಗೌಡ ಮಾತನಾಡಿದರು.
Published on

ಅರಕೇರಾ: ಶಾಲೆಗಳ ಅಭಿವೃದ್ಧಿಗೆ ಎಸ್ಡಿಎಂಸಿಗಳು ಸಹಕಾರಿಯಾಗಿವೆ ಎಂದು ಬಿಆರ್‌ಸಿ ಶಿವಕುಮಾರ ನಾಡಗೌಡ ಹೇಳಿದರು. ಶಿವಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಕ್ರೈಸ್ತ ಸಂಪನ್ಮೂಲ ಸಮೂಹ ಸಂಸ್ಥೆಯಿಂದ ಶುಕ್ರವಾರ ಏರ್ಪಡಿಸಿದ್ದ ವಲಯ ಮಟ್ಟದ ತರಬೇತಿ ಕಾರ್ಯಾಗಾರದಲ್ಲ್ಲಿ ಮಾತನಾಡಿದರು. ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಜತೆಗೆ ಸಮೂಹದ ಸಹಕಾರ ಅವಶ್ಯವಿದೆ. ಪ್ರತಿ ಮಗುವು ಗುಣಮಟ್ಟದ ಶಿಕ್ಷಣ ಪಡೆಯಬೇಕು. ಯಾವುದೇ ಮಗು ಶಾಲೆಯಿಂದ ಹೊರಗೆ ಉಳಿಯಬಾರದು. ಮಕ್ಕಳ ನಡಿಗೆ ಶಾಲೆಯ ಕಡೆಗೆ ಎಂಬ ಪ್ರಜ್ಞೆ ಮೂಡಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net