ಮೋದಿ ಸೋಲು ಯಾರಿಂದಲೂ ಸಾಧ್ಯವಿಲ್ಲ; ಕಂದಾಯ ಸಚಿವ ಆರ್.ಅಶೋಕ ಹೇಳಿಕೆ

17102022 arakera bjp join
Published on

ಅರಕೇರಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇನ್ನೂ 40 ವರ್ಷ ಕಾಲ ದೇಶದಲ್ಲಿ ಬಿಜೆಪಿ ಆಡಳಿತ ನಡೆಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಬಿಜೆಪಿ ಸೇರ್ಪಡೆಗೊಂಡ ಕಾಂಗ್ರೆಸ್ ಮುಖಂಡರನ್ನು ಬರಮಾಡಿಕೊಂಡು ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತ ನಡೆಸುತ್ತಿದೆ. ಹೀಗಾಗಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದನ್ನು ಜನತೆ ಮೆಚ್ಚಿಕೊಂಡಿದ್ದಾರೆ. ರಾಜ್ಯ ಸರ್ಕಾರ ಜನಪರ ಕಾರ್ಯಗಳನ್ನು ಮಾಡುತ್ತಿದೆ ಎಂದರು.

2023ರ ಚುನಾವಣೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದ್ದು, ಬಿಜೆಪಿ ಗೆಲುವು ನಿಶ್ಚಿತ. ಯಾರು ಏನೇ ಪಾದಯಾತ್ರೆ ಮಾಡಿದರೂ ಪರಿಣಾಮಬೀರದು. ಶಿವನಗೌಡರನ್ನು ಗೆಲ್ಲಿಸಿ ಮತ್ತೆ ಅಸೆಂಬ್ಲಿಗೆ ಕಳಿಸಿ. ರಾಜ್ಯದಲ್ಲಿ ಉನ್ನತ ಸ್ಥಾನಮಾನಗಳನ್ನು ಪಕ್ಷ ನೀಡಲಿದೆ ಎಂದರು.

ಪ್ರಮುಖರಾದ ಶಿವಣ್ಣ ತಾತ ಮುಂಡರಗಿ, ಕೆ.ಅನಂತರಾಜ ನಾಯಕ, ಶ್ಯಾಮರಾವ್ ಕುಲಕರ್ಣಿ, ಪಕ್ಷದ ತಾಲೂಕು ಅಧ್ಯಕ್ಷ ಜಂಬಣ್ಣ ನೀಲಗಲ್, ಲಿಂಗನಗೌಡ ಕೊಪ್ಪರ, ಡಾ.ಎಚ್.ಎ.ನಾಡಗೌಡ, ಶರಬಣ್ಣ ಸಾಹುಕಾರ, ಸಾಂತಪ್ಪ ಸಾಹುಕಾರ, ಶಿವುಕುಮಾರ ಬಳೆ, ತಮ್ಮಣ್ಣ ರಾಥೋಡ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net