

ಅರಕೇರಾ: ತಾಲೂಕಿನಾದ್ಯಂತ ರಂಜಾನ್ ಶ್ರದ್ಧಾ ಭಕ್ತಿಯಿಂದ ಸೋಮವಾರ ಆಚರಿಸಿದರು.
ಆಗಸದಲ್ಲಿ ಚಂದ್ರ ಗೋಚರಿಸಿದ ತರುವಾಯ ಕಳೆದ ಮೂವತ್ತು ದಿನಗಳ ಕೈಗೊಂಡಿದ್ದ ಉಪವಾಸ ಭಾನುವಾರ ಅಂತ್ಯಗೊಳಿಸಿದರು. ಮುಸ್ಲಿಂ ಸಮಾಜದವರು ಬೆಳಗ್ಗೆ ಹೊಸ ಬಟ್ಟೆ ಧರಿಸಿ ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಪಟ್ಟಣದ ಹೊರ ವಲಯದಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಅಲ್ಲದೇ ಬಡವರಿಗೆ ಬಟ್ಟೆ, ಆಹಾರ ಸಾಮಗ್ರಿ, ಹಣದ ರೂಪದಲ್ಲಿ ಕಾಣಿಕೆ ನೀಡಿದರು.
ರಾಜಾ ಸತ್ಯನಾರಾಯಣ ನಾಯಕ್ ಪೊಲೀಸ್ ಪಾಟೀಲ್, ಗುರುಗಳಾದ ಅಲಿಂಖಾಜಿ, ಬಾಷಾಸಾಬ ಆಫಿಸಾಬರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಕೆ.ಶಿವನಗೌಡ ನಾಯಕ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ. ರಾಜಶೇಖರ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಯಕ ಪೊಲೀಸ್ ಪಾಟೀಲ್, ಕಲ್ಪವೃಕ್ಷ ಸ.ಪ.ಸಂಘ ಅಧ್ಯಕ್ಷ ಬಸವರಾಜ ಪೂಜಾರಿ ಹಾಗೂ ಇತರರೊಂದಿಗೆ ಮುಸ್ಲಿಮರು ಶುಭಾಶಯ ವಿನಿಮಯ ಮಾಡಿಕೊಂಡರು.