

ಅರಕೇರಾ: ರೈತರ ರಕ್ಷಣೆಗೆ ಎಲ್ಲರೂ ನ್ಯಾಯಯುತವಾಗಿ ಹೋರಾಡಬೇಕಿದೆ ಎಂದು ರೈತ ಸಂಘದ ದೇವದುರ್ಗ ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಹೇಳಿದರು.
ತಾಲೂಕಿನ ಮಲ್ಲೆದೇವರಗುಡ್ಡದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಗ್ರಾಮ ಘಟಕ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಅನ್ನದಾತರು ಸಂಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಸರ್ಕಾರದಿಂದ ಪ್ರೋತ್ಸಾಹಿಸುವ ಕೆಲಸಗಳು ನಡೆಯುತ್ತಿಲ್ಲ. ರಾಜಕೀಯ ನಾಯಕರಿಗೆ ರೈತರ ನಾಡಿಮಿಡಿತ ತಿಳಿಯುತ್ತಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರಗಳು ಅತಂತ್ರಕ್ಕೆ ಸಿಲುಕಿಸುತ್ತಿವೆ. ರೈತರ ಮಕ್ಕಳು ಉತ್ತಮ ಸಾಧನೆ ಮಾಡಬೇಕು. ಎಲ್ಲ ರಂಗದಲ್ಲಿಯೂ ಮುಂಚೂಣಿಯಲ್ಲಿರಬೇಕು. ನಮ್ಮ ಹಕ್ಕುಗಳನ್ನು ಕೇಳುವುದಕ್ಕೆ ಸಂಘಟಿತರಾಗಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ ಎಂದರು.
ಗ್ರಾಮ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ: ಉದಯ ಕುಮಾರ ಹವಾಲ್ದಾರ್ (ಅಧ್ಯಕ್ಷ), ಮಹಾದೇವ ನಾಯಕ (ಪ್ರಧಾನ ಕಾರ್ಯದರ್ಶಿ), ಪಂಪಣ್ಣ ಗೌಡ, ಶಿವಮಾನ್ಯ ದೊರೆ, ವೆಂಕಟೇಶ ಅಂಗಡಿ, ಹನುಮೇಶಗೌಡ, ಶಿವಯ್ಯ ನಾಯಕ, ವೆಂಕಟೇಶ ನಾಯಕ, ಮಂಜುನಾಥ ಹವಾಲ್ದಾರ್, ಚಂದಪ್ಪ ದೊರೆ, ಯಂಕಣ್ಣ, ಮಲ್ಲಯ್ಯ ಮೇಟಿ ಸದಸ್ಯರಾಗಿ ಆಯ್ಕೆಯಾದರು.
ಪ್ರಮುಖರಾದ ಹರ್ಷವರ್ಧನ ನಾಯಕ ದೊರೆ, ಶ್ರೀಕಾಂತ ನಾಯಕ ಜಲ್ಲೆ, ರಮೇಶ ಸಿಪತಗೇರ್, ತಿಮ್ಮನಗೌಡ ಗೌರಂಪೇಟಿ, ಬಸವರಾಜ ಹಿರೇಮಠ, ಮಲ್ಲೇಶ ನಾಯಕ ಇತರರಿದ್ದರು.