

ಅರಕೇರಾ: ಪಟ್ಟಣದ ಶ್ರೀ ಸಿದ್ದಯ್ಯ ಹವಾಲ್ದಾರ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ 33 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,
ಇದನ್ನೂ ಓದಿ: ಪಿಯು ಪರೀಕ್ಷೆಯಲ್ಲಿ ಬಡ ವಿದ್ಯಾರ್ಥಿಗಳೂ ಟಾಪರ್
ಈ ಪೈಕಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 9 ಜನ ಅನುತ್ತೀರ್ಣರಾಗಿದ್ದಾರೆ. ಅತ್ಯುತ್ತಮ ಶ್ರೇಣಿಯಲ್ಲಿ ನಾಲ್ವರು, ಉನ್ನತ ಶ್ರೇಣಿಯಲ್ಲಿ 13 ಜನ, ದ್ವಿತೀಯ 6, ತೃತೀಯ ಶ್ರೇಣಿಯಲ್ಲಿ ಒಬ್ಬ ವಿದ್ಯಾರ್ಥಿ ಪಾಸಾಗಿದ್ದಾರೆ. ಒಟ್ಟಾರೆ ಕಾಲೇಜಿನ ಫಲಿತಾಂಶ ಶೇ.72.72 ಸಾಧಿಸಿದೆ.
ಸಂಜನಾ ಸುಣಕಲ್ ಮಹಾಂತೇಶ 552 (ಶೇ.92), ಹಾಜಿಬಾಬು ಇಬ್ರಾಹೀಂ ಸಾಬ್ 533 (ಶೇ.88.83), ಸುಪ್ರಿಯಾ ಸೂಗೂರೇಶ್ವರ ಗುಡಿ 528 (ಶೇ.88) ಅಂಕ ಗಳಿಸುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಪ್ರಾಚಾರ್ಯೆ ಬುದ್ಧಿವಂತಿ ತಿಳಿಸಿದ್ದಾರೆ.