ವ್ಯಾಪಾರೀಕರಣವಾದ ರಾಜಕಾರಣ

151222 Nagadadinni Congress Nadige Halli kadege
ನಾಗಡದಿನ್ನಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಕಾಂಗ್ರೆಸ್ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಜಿಲ್ಲಾಧ್ಯಕ್ಷ ಬಿ.ವಿ ನಾಯಕ ಚಾಲನೆ ನೀಡಿದರು.
Published on

ಅರಕೇರಾ: ತಾಲೂಕಿನಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಅವ್ಯವಹಾರ, ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳು ಮಾಡುವ ಮೂಲಕ ಬಿಜೆಪಿ ದುರಾಡಳಿತ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ರಾಜಕಾರಣವನ್ನು ವ್ಯಾಪಾರಿಕರಣ ಮಾಡಿಕೊಳ್ಳುವುದು ಸರಿಯಲ್ಲ. ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿಗೆ ನೇರ ಪೈಪೋಟಿ ಕೊಡುವುದು ಕಾಂಗ್ರೆಸ್ ಮಾತ್ರ. ಸ್ವಾರ್ಥದ ರಾಜಕಾರಣ ಮಾಡುವವರಿಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ನಾಯಕ ಹೇಳಿದರು.

ನಾಗಡದಿನ್ನಿ ಗ್ರಾಮದಲ್ಲಿ ಕಾಂಗ್ರೆಸ್ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಶ್ರೀದೇವಿ ರಾಜಶೇಖರ ನಾಯಕ ಮಾತನಾಡಿ, ಕಾಂಗ್ರೆಸ್ ಸಾಧನೆಗಳು ಮತ್ತು ಬಿಜೆಪಿ ವೈಫಲ್ಯಗಳನ್ನು ಪ್ರತಿ ಜನರ ಮನೆ-ಮನಗಳಿಗೆ ಮುಟ್ಟಿಸಲಾಗುತ್ತದೆ ಎಂದರು. ಪ್ರಮುಖರಾದ ನಾಗವೇಣಿ ಪಾಟೀಲ್, ಅಮರೇಗೌಡ ಹಂಚಿನಾಳ, ನಿರ್ಮಲಾ ಬೆಣ್ಣೆ, ಜ್ಯೋತಿ, ಪ್ರತಿಭಾ, ಭೀಮನಗೌಡ ನಾಗಡದಿನ್ನಿ, ಅಸ್ಲಾಂ ಪಾಷಾ, ಸಂದೀಪ್ ನಾಯಕ, ಕೆ.ಉಮೇಶ ಗೌಡ ಪೋ.ಪಾ, ನಾಗಲಿಂಗಪ್ಪ ಗೌಡ, ಅಂಜಿನಯ್ಯ ನಾಗಡದಿನ್ನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net