ಗುಡಿಸಲಿಗೆ ಆಕಸ್ಮಿಕ ಬೆಂಕಿ, ವ್ಯಕ್ತಿ ಸಜೀವ ದಹನ

23082020 Arakera man burn
Published on

ಅರಕೇರಾ: ಗ್ರಾಮದ ಹೊರ ವಲಯದ ಶಿವಂಗಿ ಮುಖ್ಯರಸ್ತೆಯ ಬಳಿಯ ಜಮೀನಿನಲ್ಲಿ ಗುಡಿಸಲು ಶುಕ್ರವಾರ ತಡರಾತ್ರಿ ಆಕಸ್ಮಿಕ ಬೆಂಕಿಗೆ ಸುಟ್ಟಿದ್ದು, ಇದರಲ್ಲಿ ವಾಸವಿದ್ದ ನಾಗಪ್ಪ ತಾತೆ (40) ಸಜೀವ ದಹನವಾಗಿದ್ದಾರೆ.

ಬೇರೊಂದು ಮನೆಯಲ್ಲಿ ಮೃತನ ಪತ್ನಿ ಹಾಗೂ ಮಕ್ಕಳು ಇದ್ದ ಕಾರಣ ಬಚಾವ್ ಆಗಿದ್ದಾರೆ. ಗುಡಿಸಲಿನಲ್ಲಿದ್ದ ದಿನ ಬಳಕೆ ಸಾಮಗ್ರಿ ಸಂಪೂರ್ಣ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ದೇವದುರ್ಗ ತಹಸೀಲ್ದಾರ್ ಸ್ಥಳಕ್ಕಾಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸುವ ಭರವಸೆ ನೀಡಿದರು.

ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net