ನಾಗೋಲಿ ಬಸವೇಶ್ವರ ಉತ್ಸವ ಅದ್ದೂರಿ

Untitled design(14)
Published on

ಅರಕೇರಾ: ತಾಲೂಕಿನ ನಾಗೋಲಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸೋಮವಾರ ಅದ್ದೂರಿಯಾಗಿ ಉತ್ಸವ ಜರುಗಿತು. ಬೆಳಗ್ಗೆ ಅರ್ಚಕರಿಂದ ಅಭಿಷೇಕ, ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಪುರವಂತರ ವಡವು ವಚನಗಳ ಮೇಳ ಭಾಗವಹಿಸಿತ್ತು. ಮಹಿಳೆಯರು ಕಳಸ ಹಿಡಿದು ಉತ್ಸವಕ್ಕೆ ಮೆರಗು ತಂದರು. ಜಾತ್ರಾ ಮಹೋತ್ಸವ ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net