ಮುಖ್ಯ ಶಿಕ್ಷಕಿಯ ಸರ್ವಾಧಿಕಾರಿ ವರ್ತನೆ ತಡೆಯಿರಿ

Untitled design (16)
ಅರಕೇರಾ ತಾಲೂಕಿನ ಮುಂಡರಗಿ ಸರ್ಕಾರಿ ಪ್ರೌಢ ಶಾಲೆ ಮುಂಭಾಗ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
Published on

ಅರಕೇರಾ: ತಾಲೂಕಿನ ಮುಂಡರಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಗೀತಾ ದುರ್ವತನೆ ಖಂಡಿಸಿ ಶಾಲೆಯ ಮುಂಭಾಗ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಅವರ ವರ್ತನೆ ಸರಿ ಇಲ್ಲ. ಅಡುಗೆ ತಯಾರಿ ಸೇರಿ ಇನ್ನಿತರ ಕೆಲಸಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಿಕೊಳ್ಳುತ್ತಿದ್ದಾರೆ. ಎರಡು ದಿನದ ಹಿಂದೆ ನಾಲ್ಕು ಜನ ಅತಿಥಿ ಶಿಕ್ಷಕರು ಮುಖ್ಯ ಶಿಕ್ಷಕಿ ಕಿರುಕುಳಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲವರು ಕಣ್ಣೀರು ಹಾಕಿ ಶಾಲೆಯಿಂದ ಹೊರ ನಡೆದಿದ್ದಾರೆ. ಶಾಲೆಯಲ್ಲಿ ಅತಿಥಿ ಶಿಕ್ಷಕರಿಗೆ ಮೂರು ತಿಂಗಳು ಕೆಲಸ ಮಾಡಲು ಬಿಡುತ್ತಿಲ್ಲ. ಮುಖ್ಯ ಶಿಕ್ಷಕಿ ಸರ್ವಾಧಿಕಾರಿಯಾಗಿ ದುರ್ವತನೆ ತೋರುತ್ತಿದ್ದಾರೆ. ಅವರ ಪತಿ ಸಿಬ್ಬಂದಿಯೂ ಅಲ್ಲ, ಪಾಲಕರು ಅಲ್ಲ ಶಾಲೆಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.

ಮುಖ್ಯ ಶಿಕ್ಷಕಿ ಗೀತಾ ಮನ ಬಂದಂತೆ ಮಾತನಾಡುವ ಮೂಲಕ ವಿದ್ಯಾರ್ಥಿಗಳನ್ನು ನಿಂದಿಸುತ್ತಿದ್ದಾರೆ. ಶೈಕ್ಷಣಿಕ ಅಭಿವೃದ್ಧಿಗೆ ಅವರು ಕೆಲಸ ಮಾಡುತ್ತಿಲ್ಲ. ಕರ್ತವ್ಯದ ವೇಳೆ ದುರ್ನಡತೆ ತೋರುತ್ತಿರುವ ಬಗ್ಗೆ ಪಾಲಕರಿಗೆ ತಿಳಿಸಿದರೆ ವರ್ಗಾವಣೆ ಪ್ರಮಾಣ ಪತ್ರ ನೀಡುವುದಾಗಿ ಬೆದರಿಸುತ್ತಿದ್ದಾರೆ. ಮುಖ್ಯ ಶಿಕ್ಷಕಿ ದುರ್ನಡತೆಗೆ ಶಾಲೆಗೆ ಬರಲು ಭಯವಾಗಿದ್ದು, ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು. ಅಲ್ಲಿಯವರೆಗೆ ಎಸ್ಡಿಎಂಸಿ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net