ಹಾಲುಗಂಬ ಏರಲು ಪೈಪೋಟಿ, 2 ತಾಸು ಜನರಿಗೆ ಮನರಂಜನೆ

040122 Mallapura Halugamba Utsava 2022
ಅರಕೇರಾ ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಅಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಹಾಲುಗಂಬ ಉತ್ಸವವನ್ನು ಸೋಮವಾರ ಏರ್ಪಡಿಸಲಾಗಿತ್ತು.
Published on

ಅರಕೇರಾ: ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಶ್ರೀ ಆಂಜಿನೇಯ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಹಾಲುಗಂಬ ಉತ್ಸವ ಏರ್ಪಡಿಸಲಾಗಿತ್ತು. 68 ಅಡಿ ಎತ್ತರದ ಹಾಲುಗಂಬಕ್ಕೆ ಜಾಜು ಲೇಪನ ಮಾಡಲಾಗಿತ್ತು. ಕಂಬದ ಮೇಲೆ ಕುಳಿತ ಪೂಜಾರಿ ಸ್ಪರ್ಧಿಗಳಿಗೆ ಮೇಲಿನಿಂದ ನೀರು, ಮಜ್ಜಿಗೆ ಬಿಟ್ಟರು. ಸ್ಪರ್ಧಿಗಳು ಕಂಬ ಏರಲು ಪೈಪೋಟಿ ತೋರಸಿದ್ದು, ಸುಮಾರು 2 ತಾಸು ಜನರಿಗೆ ಮನರಂಜನೆ ಒದಗಿಸಿತುಲ. ಹನುಮಂತ್ರಾಯ ನಾಗನೇಕಿ ಪ್ರಥಮರಾಗಿ ಕಂಬ ಏರಿ ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net