ಮಲ್ಲಾಪುರ-ದೇವದುರ್ಗ ಬಸ್ ಸಂಚಾರಕ್ಕೆ ಚಾಲನೆ

03082022 arakera news
Published on

ಅರಕೇರಾ: ಮಲ್ಲಾಪುರ ಗ್ರಾಮಕ್ಕೆ ಬುಧವಾರದಿಂದ ಬಸ್ ಸಂಚಾರ ಆರಂಭವಾಗಿದ್ದು, ಬಸ್‌ಗೆ ತಳಿರು-ತೋರಣಗಳಿಂದ ಅಲಂಕಾರ ಮಾಡಿ ಗ್ರಾಮಸ್ಥರು ಸಂಚಾರಕ್ಕೆ ಚಾಲನೆ ನೀಡಿದರು.

ಶಾಲಾ-ಕಾಲೇಜು, ಕಚೇರಿ ಕೆಲಸ ಕಾರ್ಯಗಳಿಗೆ ನಿತ್ಯ ನೂರಾರು ಜನ ಅರಕೇರಾ, ದೇವದುರ್ಗ ಪಟ್ಟಣಗಳಿಗೆ ಪ್ರಯಾಣಿಸುವುದಕ್ಕೆ ಖಾಸಗಿ ವಾಹನಗಳ ಮೊರೆ ಹೊಗಿದ್ದರು. ಬಸ್ ಸಂಚಾರ ಆರಂಭವಾಗಿರುವುದರಿಂದ ಗ್ರಾಮಸ್ಥರಿಗೆ ಅನುಕೂಲವಾಗಿದ್ದು, ಸದ್ಯ ಬೆಳಗ್ಗೆ ಮತ್ತು ಸಂಜೆಗೆ ಒಂದು ಬಾರಿ ಮಾತ್ರ ಮಲ್ಲಾಪುರದಿಂದ ಅರಕೇರಾ ಮಾರ್ಗವಾಗಿ ದೇವದುರ್ಗಕ್ಕೆ ಹೊರಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net