ಪ್ರಾಮಾಣಿಕತೆ ಮೆರೆದ ಕೆಕೆಆರ್‌ಟಿಸಿ ಸಿಬ್ಬಂದಿ

ಅರಕೇರಾ ಕೆಕೆಆರ್‌ಟಿಸಿ ನೌಕರ ಶೇಖ್ ಮಹಿಬೂಬ ಕಾಟಮಳ್ಳಿ ಬಸ್‌ನಲ್ಲಿ ಬಿಟ್ಟು ಹೋಗಿದ್ದ ಆಭರಣದ ಬ್ಯಾಗ್‌ನ್ನು ಆಶಾಬಿಗೆ ನೀಡಿದರು.
ಅರಕೇರಾ ಕೆಕೆಆರ್‌ಟಿಸಿ ನೌಕರ ಶೇಖ್ ಮಹಿಬೂಬ ಕಾಟಮಳ್ಳಿ ಬಸ್‌ನಲ್ಲಿ ಬಿಟ್ಟು ಹೋಗಿದ್ದ ಆಭರಣದ ಬ್ಯಾಗ್‌ನ್ನು ಆಶಾಬಿಗೆ ನೀಡಿದರು.
Published on

ಅರಕೇರಾ: ಆಭರಣವಿದ್ದ ಬ್ಯಾಗ್ ಬಸ್‌ನಲ್ಲೇ ಬಿಟ್ಟು ಹೋಗಿದ್ದ ಮಹಿಳೆಗೆ ಕೆಕೆಆರ್‌ಟಿಸಿ ಸಿಬ್ಬಂದಿ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ತಾಲೂಕಿನ ಗಲಗ ಗ್ರಾಮಕ್ಕೆ ಹೋಗುತ್ತಿದ್ದ ಆಶಾಬಿ ಬೆಂಗಳೂರಿನಿಂದ ಸಿರವಾರಕ್ಕೆ ಬಂದಿಳಿದಿದ್ದಾರೆ. ಸಿರವಾರದಲ್ಲಿ ದೇವದುರ್ಗ ಮಾರ್ಗದ ಬಸ್ ಬದಲಾಯಿಸುವಾಗ ಬ್ಯಾಗ್ ಮರೆತು ಅವಸರದಿಂದ ಅರಕೇರಾದಲ್ಲಿ ಇಳಿದಿದ್ದಾರೆ. ಬಸ್ ದೇವದುರ್ಗಕ್ಕೆ ಮುಂದೆ ಸಂಚರಿಸಿದೆ. ಆಶಾಬಿ ತನ್ನ ಬ್ಯಾಗ್ ಬಿಟ್ಟಿರುವ ಬಗ್ಗೆ ಅರಕೇರಾ ಸಂಚಾರ ನಿಯಂತ್ರಕ ಶೇಖರಪ್ಪ ಗುಡಿಗೆ ಮೂಲಕ ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಬಸ್ ಚಾಲಕ ಶೇಖ್ ಮಹಿಬೂಬ ಕಾಟಮಳ್ಳಿ ಮತ್ತು ನಿರ್ವಾಹಕ ನಾಗರಾಜ ಅವರಿಗೆ ತಿಳಿಸಿ, ಬಸ್‌ನ ಬ್ಯಾಗ್‌ನಲ್ಲಿದ್ದ 6 ಗ್ರಾಂ. ಓಲೆ, ಒಂದು ತೊಲ ಟೀಕಮಣಿ ಸರ ಮರಳಿಸಿದ್ದಾರೆ. ಕೆಕೆಆರ್‌ಟಿಸಿ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಂಚಾರ ನಿಯಂತ್ರಕ ಶೇಖರಪ್ಪ ಗುಡಿ, ನಿರ್ವಾಹಕ ನಾಗರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net