

ಅರಕೇರಾ: ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಸಾಕಷ್ಟು ಸೌಲಭ್ಯ ಕಲ್ಪಿಸುತ್ತಿದೆ. ಶಾಲೆಯಿಂದ ಹೊರಗುಳಿದ ಚಿಣ್ಣರನ್ನು ಮರಳಿ ಸ್ಕೂಲ್‌ಗೆ ಕಳುಹಿಸಿ ಅಕ್ಷರಸ್ಥರನ್ನಾಗಿ ಮಾಡಿ ಎಂದು ಶ್ರುತಿ ಸಂಸ್ಕೃತಿ ಸಂಸ್ಥೆಯ ತಾಲೂಕು ಅಧ್ಯಕ್ಷ ರಾಮಣ್ಣ ಎನ್. ಗಣೇಕಲ್ ಹೇಳಿದರು.
ಸಮೀಪದ ಜರದಬಂಡಿ ಗ್ರಾಮದಲ್ಲಿ ಶಿಕ್ಷಣ ಇಲಾಖೆ ಹಾಗೂ ಶ್ರುತಿ ಸಂಸ್ಕೃತಿ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ಶಿಕ್ಷಣ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ಕಲಿಯುವ ಮತ್ತು ನಲಿಯುವ ವಯಸ್ಸಿನ ಮಕ್ಕಳು ಮನಸ್ಸಿನ ತುಂಬಾ ಬಣ್ಣದ ಕನಸ್ಸುಗಳನ್ನು ಹೊತ್ತುಕೊಂಡಿರುತ್ತಾರೆ. ಕಷ್ಟದ ದಿನಗಳಿಗೆ ಎಡವಿ ಮಕ್ಕಳ ಬಾಳಿಗೆ ಆರಿದ ದೀಪವಾಗದಿರಿ. ಬಡತನದ ಬೇಗೆ ನೀಗಿಸಿಕೊಳ್ಳಲು ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸದಿರಿ. ಅವರ ಉಜ್ವಲ ಭವಿಷ್ಯ ಶಿಕ್ಷಣದಲ್ಲಿ ಅಡಗಿದ್ದು, ಶಾಲೆಗೆ ಕಳುಹಿಸಿ ಎಂದು ಪಾಲಕರಲ್ಲಿ ಮನವಿ ಮಾಡಿದರು.