ಗಿಡ, ಮರಗಳ ರಕ್ಷಣೆ ಎಲ್ಲರ ಕರ್ತವ್ಯ

22112021 Arakera Plant Trees distribution
Published on


ಅರಕೇರಾ: ಸಮೀಪದ ಭೂಮನಗುಂಡ ಗ್ರಾಮದ ರೈತರಿಗೆ ಐಸಿಐಸಿಐ ಫೌಂಡೇಷನ್, ತೋಟಗಾರಿಕೆ ಹಾಗೂ ಅರಣ ಇಲಾಖೆಯಿಂದ ಸೋಮವಾರ ರೈತರಿಗೆ ಪೇರಲ, ಮಾವು, ಸಪೋಟ, ಮೋಸಂಬಿ, ತೆಂಗು, ಮಹಾಗನಿ, ಶ್ರೀಗಂಧ ಸೇರಿ ಹಲವು ಬಗೆಯ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.

ತಾಪಂ ಮಾಜಿ ಸದಸ್ಯ ಹನುಮಯ್ಯ ಅರಳೆಬಂಡಿ ಮಾತನಾಡಿ, ಗಿಡ-ಮರಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಅವುಗಳನ್ನು ರಕ್ಷಿಸದಿರುವುದೇ ಪ್ರಕೃತಿ ವಿಕೋಪಕ್ಕೆ ಕಾರಣ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಿದೆ ಎಂದು ಹೇಳಿದರು. ಪ್ರತಿ ರೈತರಿಗೆ 200 ಸಸಿ ನೀಡುವ ಮೂಲಕ ಅವುಗಳನ್ನು ನೆಡುವ ಕ್ರಮ, ಪಾಲನೆ, ಪೋಷಣೆ ಕುರಿತು ಫೌಂಡೇಷನ್‌ನ ಯಶೋದಾ ಮಾಹಿತಿ ನೀಡಿದರು.

ಫೌಂಡೇಷನ್ ಅಭಿವೃದ್ಧಿ ಅಧಿಕಾರಿ ಜಿ.ನರಸಿಂಹಪ್ಪ, ಗ್ರಾಮಸ್ಥರಾದ ಬಸವರಾಜ ನಾಯಕ, ಸಿದ್ದರಾಮೇಶ, ಪರಶುರಾಮ, ಶಿವರಾಜ, ಫೌಂಡೇಷನ್‌ನ ಸುರೇಶ, ಮಹಾದೇವ, ಮಹೇಶ್ವರಪ್ಪ, ರಂಗಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net