ವಿಶ್ವವನ್ನೇ ವ್ಯಾಪಿಸಿದೆ ಡಿಜಿಟಲೀಕರಣ

14092022 Arakera news
Published on

ಅರಕೇರಾ: ಡಿಜಿಟಲೀಕರಣ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಸಾಕ್ಷರತೆಯ ಅಗತ್ಯವಿದೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಮಾತನಾಡಿ, ಕಳೆದೆರಡು ವರ್ಷಗಳಲ್ಲಿ ಕರೊನಾದಿಂದ ಜಗತ್ತು ನಲುಗಿದೆ. ಆರ್ಥಿಕತೆ, ಅಭಿವೃದ್ಧಿ ಮತ್ತು ಮಕ್ಕಳ ಕಲಿಕೆ ಮೇಲೂ ತೀವ್ರ ಪರಿಣಾಮ ಬೀರಿದೆ. ಈಗಿನ ಸಂದರ್ಭದಲ್ಲಿ ಆನ್‌ಲೈನ್ ಮೂಲಕವೇ ಕೆಲಸ ಮತ್ತು ಶಿಕ್ಷಣ ಪಡೆಯುವುದು ಅವಶ್ಯ ಎಂದರು.

ಬೆಳೆಯುತ್ತಿರುವ ಡಿಜಿಟಲ್ ಅಗತ್ಯತೆಯೊಂದಿಗೆ ಸಂಪರ್ಕ, ಮೂಲಸೌಕರ್ಯ ಮತ್ತು ತಂತ್ರಜ್ಞಾನದೊಂದಿಗೆ ತೊಡಗಿಸಿಕೊಳ್ಳುವ ಸಾಮರ್ಥ್ಯದ ವಿಷಯದಲ್ಲಿ ಸಾಕ್ಷರತೆ ಸಹಕಾರಿ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಭಗಮ್ಮ ಮುದುಕಪ್ಪ, ಉಪಾಧ್ಯಕ್ಷ ಸಿದ್ದಪ್ಪ ಪೈಕಾರ, ಎಸ್ಡಿಎಂಸಿ ಅಧ್ಯಕ್ಷ ಶೇಖರಪ್ಪಗೌಡ ಮಾ.ಪಾ, ಶಿಕ್ಷಕರಾದ ಶ್ಯಾಮೀದ್ ಅಲಿ, ಮನೋಹರ್, ವಾಸುದೇವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net