

ಅರಕೇರಾ: ಹೆಣ್ಣು ಮಕ್ಕಳ ಮನಸ್ಸು ಭಾವನಾತ್ಮಕವಾಗಿರುತ್ತದೆ ಎಂದು ಮುಖ್ಯಶಿಕ್ಷಕ ಮುರಳೀಧರರಾವ್ ಕುಲ್ಕರ್ಣಿ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು. ಜೀವನದಲ್ಲಿ ಎಂತಹ ಸಮಸ್ಯೆಗಳು ಬಂದರೂ ಧೈರ್ಯದಿಂದ ಎದುರಿಸಬೇಕು. ಸೌಜನ್ಯವಾಗಿ ಸವಾಲಗಳನ್ನು ಸ್ವೀಕರಿಸಬೇಕು. ವಿದ್ಯಾರ್ಥಿಗಳಿಗೆ ಅಂಕಗಳು ಔದ್ಯೋಗಿಕ ಜೀವನವನ್ನು ರೂಪಿಸಿದರೆ, ಸಂಸ್ಕಾರ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ಶಿಕ್ಷಕ ಚಂದಪ್ಪ ಕಂಚೇರ ಮಾತನಾಡಿ, ಶಾಲೆಯಲ್ಲಿ ಪರಿಣಾಮಕಾರಿ ಬೋಧನೆ ಮಾಡುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿವರ್ಷ ಅತ್ಯುತ್ತಮ ಸಾಧನೆ ಮಾಡಿದೆ. ಈ ಸಲ 161 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಪ್ಯಾಡ್, ಪೆನ್ನುಗಳನ್ನು ನೀಡಲಾಯಿತು. ಶಿಕ್ಷಕರಾದ ಸಂಗಪ್ಪ ಕೋಟೆಕಲ್, ಭಾಗ್ಯಶ್ರೀ, ಗೀತಾಂಜಲಿ ನೂಲಿ, ಅಜಿತ್ ಶಾಖೆ, ಮುಮ್ತಾಜ್, ಫೌಜಿಯಾ ಬೇಗಂ, ಅಂಜನಮ್ಮ, ಸಿಬ್ಬಂದಿ ಶೇಕ್ಷಾವಲ್ಲಿ, ವಿಜಯಲಕ್ಷ್ಮೀ, ಮಾಯಮ್ಮ, ಲಕ್ಷ್ಮೀ, ಸರಸ್ವತಿ, ನಿರ್ಮಲಾ ಇತರರಿದ್ದರು.