ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಣೆ, ಸಂಕಷ್ಟಗಳ ನಡುವೆ ಬೆಳೆದ ಅಕ್ಷರ ತಾಯಿ

030122 Raichur Savitri bai Pule Birthday
ಅರಕೇರಾದ ಶ್ರೀ ಸಿದ್ದಯ್ಯ ಹವಾಲ್ದಾರ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಸೋಮವಾರ ಆಚರಿಸಲಾಯಿತು.
Published on

ಅರಕೇರಾ: ಸ್ತ್ರೀಯರಿಗೆ ಶೈಕ್ಷಣಿಕವಾಗಿ ಪ್ರೇರಣೆಯಾದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಮುಖ್ಯ ಶಿಕ್ಷಕ ಜಗದೀಶಪ್ಪ ಹೇಳಿದರು.

ಪಟ್ಟಣದ ಶ್ರೀ ಸಿದ್ದಯ್ಯ ಹವಾಲ್ದಾರ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಣೆ ನಿಮಿತ್ತ ಸೋಮವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸಾವಿತ್ರಿಬಾಯಿ ಫುಲೆ ಸಂಕಷ್ಟಗಳ ನಡುವೆ ಬೆಳೆದು ಅಕ್ಷರದ ತಾಯಿಯಾಗಿ ಕೀರ್ತಿ ಪಡೆದರು. ಅವರ ಆದರ್ಶಗಳನ್ನು ಇಂದಿನ ಪೀಳಿಗೆಯವರು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿನ ಎಲ್ಲ ಪಿಡುಗುಗಳನ್ನು ಸಮರ್ಥವಾಗಿ ಎದುರಿಸಿದ್ದರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net