ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಿ, ಬಿಎಲ್‌ಒಗಳಿಗೆ ತಹಸೀಲ್ದಾರ್ ಶ್ರೀನಿವಾಸ ಚಾಪೇಲ್ ಸೂಚನೆ

211122 Aarakera GP Electoral Roll Revision Meeting
ದೇವದುರ್ಗ ತಹಸೀಲ್ದಾರ್ ಶ್ರೀನಿವಾಸ ಚಾಪೇಲ್ ಅಧ್ಯಕ್ಷತೆಯಲ್ಲಿ ಅರಕೇರಾ ಗ್ರಾಪಂ ಸಭಾಂಗಣದಲ್ಲಿ ಸೋಮವಾರ ಮತದಾರರ ಪಟ್ಟಿ ಪರಿಷ್ಕರಣೆ ಸಭೆ ನಡೆಯಿತು.
Published on

ಅರಕೇರಾ: ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಬೂತ್ ಮಟ್ಟದ ಅಧಿಕಾರಿಗಳಿಗೆ ತಹಸೀಲ್ದಾರ್ ಶ್ರೀನಿವಾಸ ಚಾಪೇಲ್ ಸೂಚನೆ ನೀಡಿದರು.

ಸ್ಥಳೀಯ ಗ್ರಾಪಂ ಸಭಾಂಗಣದಲ್ಲಿ ಸೋಮವಾರ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಮಾತನಾಡಿದರು. ಆಧಾರ್ ಜೋಡಣೆ, ಹೊಸ ನೋಂದಣಿ, ತಿದ್ದುಪಡಿ, ವಿಳಾಸ ಬದಲಾವಣೆ , ಕ್ಷೇತ್ರ ಬದಲಾವಣೆ ಸೇರಿ ವಿವಿಧ ಕಾರ್ಯಗಳನ್ನು ಗೊಂದಲವಿಲ್ಲದೆ ಜವಾಬ್ದಾರಿಯಿಂದ ಮಾಡಬೇಕು. ಯಾವುದೇ ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗೆ ಉಳಿಯಬಾರದು ಎಂದರು.

ಅರ್ಹ ಹೊಸ ಮತದಾರರನ್ನು ಗುರುತಿಸಿ ನಿಗದಿತ ಅರ್ಜಿ ನಮೂನೆ ಪಡೆದು ಪಟ್ಟಿಗೆ ಸೇರಿಸಬೇಕು. ಹೋಬಳಿ ವ್ಯಾಪ್ತಿಯಲ್ಲಿ 69 ಮತಗಟ್ಟೆಗಳಿದ್ದು, ಪ್ರಸ್ತುತ ಪರಿಷ್ಕರಣೆಯಲ್ಲಿ ಶೇ. 77.19 ಪ್ರಗತಿ ಸಾಧಿಸಲಾಗಿದ್ದು, ಶೇ. 95 ರಷ್ಟು ಗುರಿ ಹೊಂದಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು. ಬಿಎಲ್‌ಒಗಳಾದ ಆದನಗೌಡ ಪಾಟೀಲ್, ಪ್ರಭಾಕರ ಪತ್ತಾರ, ಸಿದ್ದನಗೌಡ, ಮಲ್ಲಮ್ಮ, ಸುಮಂಗಲಾ, ಉಮಾದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net