ಮಕ್ಕಳು ಗುರಿ ಸಾಧನೆಗೆ ಸಂಕಲ್ಪ ಮಾಡಲು ಶಾಸಕ ಕೆ.ಶಿವನಗೌಡ ನಾಯಕ ಕಿವಿಮಾತು

02022 Piligunda Shivanagouda Nayaka Speach
ಅರಕೇರಾ ಸಮೀಪದ ಪಿಲಿಗುಂಡ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿದರು.
Published on

ಅರಕೇರಾ: ನಾಡಿನ ಕಲ್ಯಾಣಕ್ಕಾಗಿ ದುಡಿಯುವವರು ಸಮಾಜದ ಆದರ್ಶ ವ್ಯಕ್ತಿಯಾಗಿರುತ್ತಾರೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

ಸಮೀಪದ ಪಿಲಿಗುಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿxಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಗುರಿ ಇಟ್ಟುಕೊಂಡು ಸಂಕಲ್ಪ ಮಾಡಬೇಕು. ಒಳ್ಳೆಯ ವಿಚಾರಧಾರೆಗಳು ಮಕ್ಕಳಲ್ಲಿ ಮೂಡುವಂತೆ ಶಿಕ್ಷಣ ನೀಡಬೇಕು ಎಂದರು.

ಗ್ರಾಮಸ್ಥರ ಮನವಿ
ಪಿಲಿಗುಂಡ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಹೊಸ ಕಟ್ಟಡ ಮಂಜೂರು ಮಾಡಬೇಕು. ಗ್ರಾಮದಲ್ಲಿ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು. ಸಿಸಿ ರಸ್ತೆ, ಚರಂಡಿ ಮತ್ತು ಸಮುದಾಯ ಭವನ ನಿರ್ಮಿಸುವಂತೆ ಶಾಸಕಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ರಿಮ್ಸ್ ಆಡಳಿತ ಮಂಡಳಿ ನಾಮನಿರ್ದೇಶಿತ ಸದಸ್ಯ ಡಾ.ಎಚ್.ಎ.ನಾಡಗೌಡ, ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ ರಂಗಪ್ಪ, ತಹಸೀಲ್ದಾರ್ ಶ್ರೀನಿವಾಸ ಚಾಪೇಲ್, ತಾಪಂ ಇಒ ಪಂಪಾಪತಿ ಹಿರೇಮಠ, ಜೆಸ್ಕಾಂ ಎಇಇ ಕಳಕಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಪ್ರಿಯಾಂಕಾ, ಸಿಡಿಪಿಒ ವೆಂಕಟಪ್ಪ, ನಿವೃತ್ತ ತಹಸೀಲ್ದಾರ್ ಲಕ್ಷ್ಮಣ ನಾಯಕ ಪಿಲಿಗುಂಡ, ಬಿಜೆಪಿ ಮಂಡಲ ಅಧ್ಯಕ್ಷ ಜಂಬಣ್ಣ ನಿಲೋಗಲ್, ಪ್ರಮುಖರಾದ ಶಿವಣ್ಣ ಪೈಕಾರ, ಕೆಂಚಣ್ಣ ಪೂಜಾರಿ, ಯಲ್ಲಪ್ಪ, ನರಸಣ್ಣ ನಾಯಕ, ಭೀಮಣ್ಣ ನಾಯಕ ದೊರೆ, ತಿರುಪತಿ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net