ಅಪ್ರತಿಮ ರಾಷ್ಟ್ರಪ್ರೇಮಿ ಪಂಡೀತ್ ದೀನದಯಾಳ್

25092022 arakera Pandit Deendayal Upadhyay Birthday Celebration
Published on


ಬಿಜೆಪಿ ಹಿರಿಯ ಮುಖಂಡ ಕೆ.ಅನಂತರಾಜ ನಾಯಕ ಬಣ್ಣನೆ | ಅರಕೇರಾದಲ್ಲಿ ಉಪಾಧ್ಯಯರ ಜನ್ಮದಿನಾಚರಣೆ

ಅರಕೇರಾ: ಪಂಡಿತ್ ದೀನದಯಾಳ್ ಉಪಾಧ್ಯಾಯರು ದೇಶದಲ್ಲಿ ಉಂಟಾಗುತ್ತಿದ್ದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೇ ಅಪ್ರತಿಮ ರಾಷ್ಟ್ರ ಪ್ರೇಮಿಯಾಗಿದ್ದರು ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಅನಂತರಾಜ ನಾಯಕ ತಿಳಿಸಿದರು.

ಪಟ್ಟಣದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಮನೆಗಳಲ್ಲಿ ಆಚರಿಸಲಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದ ಅಂದಿನ ರಾಷ್ಟ್ರ ನಾಯಕರಲ್ಲಿ ನಡೆಯುತ್ತಿದ್ದ ಸೈದ್ಧಾಂತಿಕ ವಾದ-ವಿವಾದಗಳು, ಸಮಾಜವಾದ, ವಿಮರ್ಶಾವಾದಗಳ ನಡುವೆಯೇ ರಾಷ್ಟ್ರ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು ಎಂದರು.
ಯುವಕರಲ್ಲಿ ದೇಶಪ್ರೇಮ ತುಂಬಿದ ದೀನದಯಾಳ್ ಅವರು ಗಾಂಧೀಜಿ ಅವರ ಕನಸಿನ ರಾಷ್ಟ್ರೀಯ ಸೇವಾ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದರು. ತಾನೂ ಬೆಳೆದು ಇತರರನ್ನೂ ಬೆಳೆಸುವ ನಾಯಕತ್ವದ ಗುಣ ಮೈಗೂಡಿಸಿಕೊಂಡಿದ್ದ ಉಪಾಧ್ಯಾಯರು ಅತ್ಯಂತ ಸರಳ ಜೀವಿ. ಭಾರತೀಯ ಪರಂಪರೆಯ ಮೂಲತತ್ವವನ್ನು ಜನರಿಗೆ ತಿಳಿಸಲು ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶಿ ಪತ್ರಿಕೆಗಳನ್ನು ಹುಟ್ಟುಹಾಕಿದರು. ಅವರ ಆದರ್ಶ ಗುಣಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net