

ಅರಕೇರಾ: ಬಿಜೆಪಿ ತತ್ವ, ಸಿದ್ಧಾಂತ ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಯುವ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ಪಟ್ಟಣದಲ್ಲಿರುವ ನಿವಾಸದಲ್ಲಿ ಶುಕ್ರವಾರ ವಿವಿಧ ಪಕ್ಷಗಳ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬ ಕಾರ್ಯಕರ್ತ ಪಕ್ಷ ನಿಷ್ಠೆ ತೋರಬೇಕು. ಬಿಜೆಪಿ ಬಲವರ್ಧನೆಗಾಗಿ ಸಕ್ರಿಯವಾಗಿ ಶ್ರಮಿಸಬೇಕು. ತಾಲೂಕಿನಲ್ಲಿ ವಿವಿಧ ಪಕ್ಷಗಳ 10 ಸಾವಿರ ಕಾರ್ಯಕರ್ತರು ಇನ್ನೂ 2ರಿಂದ 3 ತಿಂಗಳಲ್ಲಿ ಬಿಜೆಪಿ ಸೇರುವ ನಿರೀಕ್ಷೆ ಇದೆ ಎಂದರು.
ಅರಕೇರಾ, ಕೆ.ಹನುಮಂತ್ರಾಯ ನಗರ, ಪಿಲಿಗುಂಡ, ಶಾವಂತಗಲ್, ನಾಗೋಲಿ, ಬೂದಿನಾಳ, ಆಲ್ಕೋಡ್, ಅನ್ವರ, ಮರಕಂದಿನ್ನಿ ಗ್ರಾಮದ ವಿವಿಧ ಪಕ್ಷಗಳ ಕಾರ್ಯಕರ್ತರು ಶಾಸಕ ಕೆ.ಶಿವನಗೌಡ ನಾಯಕ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಪ್ರಮುಖರಾದ ಶಾಂತಪ್ಪ ಸಾಹುಕಾರ ಬಿ.ಗಣೇಕಲ್, ಶಿವಶಂಕರ ಪಾಟೀಲ್, ಶರಣಪ್ಪ ಬುದ್ದಿನ್ನಿ, ದುರ್ಗಣ್ಣ ಗೌಡ ಆಕಳಕುಂಪಿ, ರಾಮಕೃಷ್ಣ ದೊರೆ ಪಿಲಿಗುಂಡ, ಹನುಮಂತ ಶಾವಂತಗಲ್, ಮುದಿರಂಗಪ್ಪ ನಾಯಕ ನಾಗೋಲಿ, ಕೆ.ಭಗವಂತ್ರಾಯ ನಾಯಕ, ರಾಮನಗೌಡ ನಾಯಕ ದೊರೆ, ಶಿವಕುಮಾರ ಬಳೆ, ಗೋಪಾಲಕೃಷ್ಣ ಮೇಟಿ, ಬೂದಯ್ಯ ಸ್ವಾಮಿ, ಸಿದ್ದಪ್ಪ ಪೈಕಾರ, ರವಿನಾಯಕ, ನಾಗರಾಜ ಕರ್ನಾಳ, ಬಾಷಾ ಸಾಬ್, ಶೇಖರಪ್ಪ ರಾಠೋಡ್ ಇದ್ದರು.