ಸುಟ್ಟು ಕರಕಲಾಗಿವೆ ಮೃತ ದೇಹ, ನೋಡಲಾಗುತ್ತಿಲ್ಲ ಸಂಬಂಧಿಕರ ಆಕ್ರಂದನ!

186a4a63-cb29-4f4b-8feb-ed3ae815bfc3
Published on

ಅರಕಲಗೂಡು: ತಾಲೂಕಿನ ಬಸವನಹಳ್ಳಿ ಪಡುವಲುಹಿಪ್ಪೆ ರಸ್ತೆಯಲ್ಲಿ ಸಂಭವಿಸಿದ ಲಾರಿ ದುರಂತದಲ್ಲಿ ಸಾವಿಗೀಡಾದ ಇಬ್ಬರು ಮೃತದೇಹಗಳು ಸುಟ್ಟು ಕರಕಲಾಗಿವೆ.

ಶನಿವಾರ ತಡರಾತ್ರಿ ಮೈಸೂರು ರಿಲಯನ್ಸ್ ಕಂಪನಿಯಿಂದ ಹಾಸನದ ಹಿಮತ್ ಸಿಂಗ್ ಕಂಪನಿಗೆ ಸೋಡಿಯಂ ಕ್ಲೋರೈಡ್ ಕೆಮಿಕಲ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಮೂವರು ಮೃತಪಟ್ಟಿದ್ದರು.

ಗೊರವನಹಳ್ಳಿ ಚಾಲಕ ಪುಟ್ಟರಾಜು, ಕೆಮಿಕಲ್ ಅನ್ ಲೋಡ್ ಮಾಡಲು ಪ್ರಯಾಣಿಸುತ್ತಿದ್ದ ಪ್ರಮೋದ್, ಪರಮೇಶ್ ಸಾವಿಗೀಡಾಗಿದ್ದರು. ಅರಕಲಗೂಡು ಪೊಲೀಸರು ಭಾನುವಾರ ಬೆಳಗ್ಗೆ ಕ್ರೇನ್ ತರಿಸಿ ಲಾರಿಯಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಮುಂದಾದ ವೇಳೆ ರಸ್ತೆ ಬದಿ ಹಳ್ಳಕ್ಕೆ ಬಿದ್ದಿದ್ದ ಇಬ್ಬರು ಮೇಲೇಳಲಾಗದೆ ಲಾರಿಯಲ್ಲಿ ಬೆಂಕಿ ಹೊತ್ತಿ ಶವದ ಅವಶೇಷ ಕೂಡ ಸಿಗದೆ ದೇಹ ಸಂಪೂರ್ಣ ನುಜ್ಜುಗಜ್ಜಾಗಿ ಬದು ಬೂದಿಯಾಗಿತ್ತು. ಮೃತದೇಹಗಳನ್ನು ಕಾಣದೆ ದುಖಃದಲ್ಲಿ ಮುಳುಗಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net