ಅರಕಲಗೂಡು- ಶಿವಕುಮಾರ ಸ್ವಾಮೀಜಿ ಜಯಂತಿ

1ark3
Published on

ಅರಕಲಗೂಡು :  ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕಾಯಕ ಸೇವೆ ಮಹೋನ್ನತವಾದದ್ದು ಎಂದು ತಹಸೀಲ್ದಾರ್ ಸೌಮ್ಯಾ ಹೇಳಿದರು.

ಪಟ್ಟಣದ ಕೊತ್ತಲು ಗಣಪತಿ ದೇವಾಲಯ ಆವರಣದಲ್ಲಿ ವೀರಶೈವ ಸಮಾಜದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಕ್ತಿ ಭಂಡಾರಿ ಬಸವಣ್ಣನವರ ನಂತರ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವರು ಶ್ರೀ ಶಿವಕುಮಾರ ಸ್ವಾಮೀಜಿ. ಅವರ ತ್ರಿವಿಧ ಸೇವಾ ಕಾರ್ಯಗಳನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಆಶಿಸಿದರು.

ಶಾಸಕ ಎ. ಮಂಜು ಮಾತನಾಡಿ, ಜಾತಿ, ಧರ್ಮ ಎಣಿಸದೇ ಅನ್ನ ದಾಸೋಹದೊಂದಿಗೆ ಸಾಮಾನ್ಯ ವರ್ಗದ ಮಕ್ಕಳಿಗೂ ಶಿಕ್ಷಣ ನೀಡಿದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಸೇವೆ ವಿಶ್ವಮಾನ್ಯ ಎಂದರು. ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಮಾಜಿ ಅಧ್ಯಕ್ಷರಾದ ಹೂವಣ್ಣ, ಲೋಕೇಶ್, ಸದಸ್ಯೆ ರಶ್ಮಿ, ವೀರಶೈವ ಸಮಾಜದ ಮುಖಂಡರಾದ ಚಂದು, ಸುರೇಶ್, ವೇದಮೂರ್ತಿ, ಕಮಲಮ್ಮ, ಮಹೇಶ್, ಯೋಗೇಶ್, ಶಿವಣ್ಣ, ಪ್ರಕಾಶ್, ಮಲ್ಲೇಶ್, ಜಗದೀಶ್, ಮಲ್ಲಪ್ಪ ಇತರರಿದ್ದರು. ನಂತರ ಸಾರ್ವಜನಿಕರಿಗೆ ಅನ್ನ ದಾಸೋಹ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net