ಸಚಿವಾಕಾಂಕ್ಷಿ ನಾನು, ಆದ್ರೆ ಲಾಭಿ ಮಾಡಲ್ಲ: ಆರಗ ಜ್ಞಾನೇಂದ್ರ

Araga Gnandra (1) (1)
Published on

ಶಿವಮೊಗ್ಗ: ಬಿಜೆಪಿಯಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದು ನಾನು ಕೂಡ ಸಚಿವಾಕಾಂಕ್ಷಿಯಾಗಿದ್ದೇನೆ. ಆದರೆ ಅದಕ್ಕಾಗಿ ಎಂದಿಗೂ ಲಾಭಿ ಮಾಡುವುದಿಲ್ಲ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯಾದರೂ ಸಚಿವ ಸ್ಥಾನ ನೀಡಬೇಕೆಂಬುದು ನನ್ನ ಬೇಡಿಕೆ ಇದೆ. ಯಾವುದೇ ಹುದ್ದೆಗಾಗಲಿ ಜೀವನದಲ್ಲಿ ಎಂದಿಗೂ ಲಾಭಿ ಮಾಡಿಲ್ಲ. ಬಿಜೆಪಿಯಲ್ಲಿ ಲಾಭಿಗೆ ಅವಕಾಶವೂ ಇಲ್ಲ ಎಂದರು.
ಸಿಎಂ ಬದಲಾವಣೆ ಇಲ್ಲ. ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕರು. ಸಿಎಂ ಸ್ಥಾನದಲ್ಲಿ ಅವರೇ ಮುಂದುವರಿಯುತ್ತಾರೆ. ಅವಧಿಯನ್ನೂ ಪೂರ್ಣಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ 17 ಮಂದಿ ಪಾತ್ರ ಪ್ರಮುಖವಾಗಿದ್ದು ನುಡಿದಂತೆ ನಡೆದುಕೊಳ್ಳಬೇಕಿದೆ. ಅದರ ಜತೆಗೆ ಪಕ್ಷದವರಿಗೂ ಆದ್ಯತೆ ನೀಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net