ಆರಗ ಜ್ಞಾನೇಂದ್ರ ಕ್ಷಮೆಯಾಚಿಸಲಿ

3RAIBAG2.jpeg
Published on

ರಾಯಬಾಗ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ಹಗುರವಾಗಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷಮೆಯಾಚಿಸಬೇಕು ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ನಾಮದೇವ ಕಾಂಬಳೆ ಆಗ್ರಹಿಸಿದರು.
 
ರಾಯಬಾಗ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ನಾಮದೇವ ಕಾಂಬಳೆ ಮಾತನಾಡಿದರು. ಶ್ರವಣಕುಮಾರ ಕಾಂಬಳೆ, ದಿಲೀಪ ಪಾಯನ್ನವರ, ಕಾಡೇಶ ಐಹೊಳೆ, ಅಣ್ಣಪ್ಪ ಅಸೋದೆ ಇತರರಿದ್ದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಗೃಹ ಸಚಿವರು ಮಾತಿನ ಭರದಲ್ಲಿ ಎಐಸಿಸಿ ಅಧ್ಯಕ್ಷರ ಕಪ್ಪು ಮೈಬಣ್ಣದ ಬಗ್ಗೆ ಹಗುರವಾಗಿ ಮಾತನಾಡಿ ಅವರ ಮನದಾಳದಲ್ಲಿರುವ ಮನುಸ್ಮತಿ ಮನಸ್ಥಿತಿ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವರು ಆಡಿರುವ ಮಾತುಗಳಿಂದ ದಲಿತ ಸಮುದಾಯಕ್ಕೆ ದೊಡ್ಡ ಅಪಮಾನವಾಗಿದೆ. ಕೂಡಲೇ ಆರಗ ಜ್ಞಾನೇಂದ್ರ ಆಡಿರುವ ಮಾತಿಗೆ ಬಹಿರಂಗವಾಗಿ ಮಲ್ಲಿಕಾರ್ಜುನ ಖರ್ಗೆಯವರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಶ್ರವಣಕುಮಾರ ಕಾಂಬಳೆ, ದಿಲೀಪ ಪಾಯನ್ನವರ, ಕಾಡೇಶ ಐಹೊಳೆ,
ಅಣ್ಣಪ್ಪ ಅಸೋದೆ, ಮಿಲಿಂದ ಚಿಂಚಲಿಕರ, ವಿಠ್ಠಲ ತಳವಾರ, ಪ್ರೇಮ ಕಾಂಬಳೆ, ಚೇತನ ಕಾಂಬಳೆ, ಲಕ್ಷ್ಮಣ ಕಾಂಬಳೆ, ವಿನಾಯಕ ಕಾಂಬಳೆ, ಮಂಜುನಾಥ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net