ನ.10ರಂದು ಅಂಚನ್ ಮೂಲಸ್ಥಾನದಲ್ಲಿ ಆರಾಧನೋತ್ಸವ-ವಾರ್ಷಿಕ ಉತ್ಸವ

daiva
Published on

ಮಂಗಳೂರು: ಮಂಗಳೂರು ತಾಲೂಕಿನ ಪೋರ್ಕೊಡಿ- ಪೇಜಾವರ ಕಡೆಂಬಿಸ್ಥಾನದಲ್ಲಿರುವ ಅಂಚನ್ ಮೂಲಸ್ಥಾನದಲ್ಲಿ ನ. 10ನೇ ಆದಿತ್ಯವಾರದಂದು ವಾರ್ಷಿಕ ಉತ್ಸವ ನಡೆಯಲಿದೆ . ಬೆಳಗ್ಗೆ 9ಕ್ಕೆ ದೈವದ ಆರಾಧನೋತ್ಸವ ನಡೆದು ಪಂಜುರ್ಲಿ ದೈವದ ದರ್ಶನ ಸೇವೆ ನಡೆಯಲಿದೆ. ವಾರ್ಷಿಕ ಉತ್ಸವದಲ್ಲಿ ಭಾಗವಹಿಸಿ ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸುವಂತೆ ಅಂಚನ್ ಮೂಲಸ್ಥಾನ ಕುಟುಂಬಸ್ಥರ ಸಮಿತಿ ಇದರ ಅಧ್ಯಕ್ಷ ಎಸ್.ತಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net