ಗುರು ಸಾರ್ವಭೌಮರ ಆರಾಧನಾ ಪಂಚರಾತ್ರೋತ್ಸವ 31ರಿಂದ

RAGHAVENDRA SWAMI download
Published on

ಚಿತ್ರದುರ್ಗ: ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ಆ.31ರಿಂದ ಸೆಪ್ಟೆಂಬರ್ 2ರ ವರೆಗೆ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 352ನೇ ಆರಾಧನಾ ಪಂಚರಾತ್ರೋತ್ಸವ ಆಯೋಜಿಸಲಾಗಿದೆ.

29ರ ಬೆಳಗ್ಗೆ 6.30ರಿಂದ ಋಗ್ವೇದ ನಿತ್ಯ, ನೂತನ ಉಪಕರ್ಮ. 30ರ ಬೆಳಗ್ಗೆ 6.30ರಿಂದ ಯಜುರ್ವೇದ ನಿತ್ಯ ನೂತನ ಉಪಾಕರ್ಮ, ಸಂಜೆ 6.30ಕ್ಕೆ ಪಂಚರಾತ್ರೋತ್ಸವ ಅಂಗವಾಗಿ ಧ್ವಜಾರೋಹಣ, ಗೋಪೂಜೆ, ಧನ, ಧಾನ್ಯ ಪೂಜೆ, ಲಕ್ಷ್ಮೀಪೂಜೆ, ಸ್ವಸ್ತಿ ವಾಚನ ಹಾಗೂ ಮಹಾಮಂಗಳಾರತಿ ನೆರವೇರಲಿದೆ.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಪ್ರಮುಖರಾದ ಆನಂದರಾಮ ಉಳ್ಳೂರು ಹಾಗೂ ವೇದವ್ಯಾಸಾಚಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

31ರಂದು ಪೂರ್ವಾರಾಧನೆ, ಸಂಜೆ 5ಕ್ಕೆ ಪಾಂಡುರಂಗ ಭಜನಾ ಮಂಡಳಿಯಿಂದ ಭಜನೆ, 6.30ಕ್ಕೆ ಸಿಂಧೂರ ದರ್ಶನ್ ಮತ್ತು ಸೌಂದರ್ಯ, ಸಂಗೀತಾ ಅವರಿಂದ ಭರತನಾಟ್ಯ.

ಸೆಪ್ಟೆಂಬರ್ 1ರ ಸಂಜೆ 5.30ಕ್ಕೆ ಬ್ರಹ್ಮಚೈತನ್ಯ ಭಜನಾ ಮಂಡಳಿಯಿಂದ ಭಜನೆ. 6.30ಕ್ಕೆ ಅಂಜನಾ ನೃತ್ಯ ಕಲಾ ಕೇಂದ್ರದ ಡಾ.ನಂದಿನಿ ಶಿವಪ್ರಕಾಶ್ ಅವರಿಂದ ಭರತನಾಟ್ಯ. 2ರ ಸಂಜೆ 5ಕ್ಕೆ ಸಪ್ತಗಿರಿ ಭಜನಾ ಮಂಡಳಿಯಿಂದ ಭಜನೆ, 6.30ಕ್ಕೆ ಹರಿ ಹರದ ಫಲ್ಗುಣಿ ಕಲಾ ತಂಡದಿಂದ ನೃತ್ಯ ಕಾರ‌್ಯಕ್ರಮ, ಸ್ತುತಿ ಆರ್.ರಾವ್ ಅವರಿಂದ ದಾಸವಾಣಿ, ಉತ್ತರಾರಾಧನೆ ಅಂಗವಾಗಿ ರಾಜ ಬೀದಿಗಳಲ್ಲಿ ಮಹಾರಥೋತ್ಸವ ಇರಲಿದೆ.

3ರ ಸಂಜೆ 5ರಿಂದ ಸರಸ್ವತಿ ಭಜನಾ ಮಂಡಳಿಯಿಂದ ಭಜನೆ, 6.30ರಿಂದ ಸಂಧ್ಯಾ ಜೈಶಂಕರ್ ತಾಳ್ಯ ಅವರಿಂದ ದಾಸವಾಣಿ ಕಾರ‌್ಯಕ್ರಮ, 3 ದಿನಗಳ ಕಾಲ ಅನ್ನಸಂತರ್ಪಣೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9741400492ನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net