

ಹುಬ್ಬಳ್ಳಿ : ಇಲ್ಲಿನ ವಿದ್ಯಾನಗರ ಪರಿಮಳ ಮಾರ್ಗದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ. 26 ರಿಂದ ಸೆ. 2ರವರೆಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಹಾಗೂ ಶ್ರೀ ಮಠದ ರಜತ ಮಹೋತ್ಸವ ಆಯೋಜಿಸಲಾಗಿದೆ.
ಆ. 26 ರಿಂದ 30ರವರೆಗಿನ ಸಂಜೆ 6.30 ರಿಂದ 7.30ರವರೆಗ ಪಂ. ಪೂರ್ಣಪ್ರಜ್ಞಾಚಾರ್ಯ ಮಳಗಿ ಅವರಿಂದ ಶ್ರಿ ರಾಘವೇಂದ್ರ ಸ್ವಾಮಿಗಳ ಸ್ತೋತ್ರ ಮಹಿಮೆ ಹಾಗೂ ಸಂದೇಶ ಕುರಿತ ಉಪನ್ಯಾಸ ಆಯೋಜಿಸಲಾಗಿದೆ.