ಆರಾಧನ ಮಹೋತ್ಸವದ ಪೂರ್ವರಾಧನೆ

New jayateertha
Published on

ಹುಬ್ಬಳ್ಳಿ : ಇಲ್ಲಿನ ಸಂತೋಷ ನಗರದಲ್ಲಿರುವ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುಸಾರ್ವಭೌಮರ 353 ನೇ ಆರಾಧನ ಮಹೋತ್ಸವದ ಪೂರ್ವರಾಧನೆ ಅಂಗವಾಗಿ ಆ. 20 ರಂದು ಸಂಜೆ 6 ರಿಂದ 7 ಗಂಟೆವರೆಗೆ ಪಂಡಿತ ಡಾ . ವೆಂಕಟನರಸಿಂಹ ಜೋಶಿ ಅವರಿಂದ ಉಪನ್ಯಾಸ, ನಂತರ ರಾತ್ರಿ 7 ರಿಂದ 8 ರವರೆಗೆ ಗಾಯಕ ಜಯತೀರ್ಥ ತಾಸಗಾವ ಅವರು ದಾಸವಾಣಿ ಪ್ರಸ್ತುತಪಡಿಸುವರು.

ತಬಲಾ ಸಾಥಿದಾರರಾಗಿ ರಾಘವೇಂದ್ರ ನಾಕೋಡ, ಮನುಕುಮಾರ ಹಿರೇಮಠ, ಸಂವಾದಿನಿಗಾಗಿ ವಿಜಯಕುಮಾರ ಅರ್ಕಸಾಲಿ ಮತ್ತು ತಾಳ ವಾದ್ಯಕ್ಕಾಗಿ ಮನೋಹರ ಜೋಶಿ ಭಾಗವಹಿಸುವರು ಎಂದು ಮಠದ ಧರ್ಮದರ್ಶಿ ಗೋವಿಂದ ಆಚಾರ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net