ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

Aradhana mahotsava of Shri Raghavendra Swami
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
Published on

ಮಹಾಲಿಂಗಪುರ: ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವ ನಿಮಿತ್ತ ಸ್ಥಳೀಯ ವಾಸವಿನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ಧ್ವಜಾರೋಹಣ, ಲಕ್ಷ್ಮೀ ಪೂಜೆ, ಗೋವುಪೂಜೆ, ಪ್ರಾರ್ಥನೋತ್ಸವ ಕಾರ್ಯಕ್ರಮಗಳು ನಡೆದವು.
ಆ. 20 ರಂದು ಪೂರ್ವಾರಾಧನೆ, ಆ. 21 ರಂದು ಮಧ್ಯಾರಾಧನೆ, ರಥೋತ್ಸವ ಹಾಗೂ ಆ. 22 ರಂದು ಉತ್ತರಾಧನೆ ಹಾಗೂ ರಥೋತ್ಸವ ನಡೆಯಲಿದೆ.

ನಿತ್ಯ ಪ್ರಾಥಃಕಾಲ 5ಕ್ಕೆ ಸುಪ್ರಭಾತ, ಬೆಳಗ್ಗೆ 5.30 ಕ್ಕೆ ನಿರ್ಮಾಲ್ಯ ವಿಸರ್ಜನೆ, 7ಕ್ಕೆ ಅಷ್ಟೋತ್ತರ ಪಾರಾಯಣ, 7.30ಕ್ಕೆ ಪಂಚಾಮೃತ ಅಭಿಷೇಕ, 10ಕ್ಕೆ ಕನಕಾಭಿಷೇಕ, ಮಧ್ಯಾಹ್ನ 12.30ಕ್ಕೆ ನೈವೇದ್ಯ, ಅಲಂಕಾರ ಹಸ್ತೋದಕ, ಮಹಾಮಂಗಳಾರತಿ, ತೀರ್ಥಪ್ರಸಾದ, ಸಂಜೆ 8ಕ್ಕೆ ಸ್ವಸ್ತಿವಾಚನ, ಮಹಾಮಂಗಳಾರತಿ ನಡೆಯಲಿದೆ ಎಂದು ಮಠದ ಪ್ರಕಟನೆ ತಿಳಿಸಿದೆ. ಮಾಹಿತಿಗೆ ಮೊ: 8861139790ಗೆ ಸಂಪರ್ಕಿಸಬಹುದು.

ಆರಾಧನೆ ಮಹೋತ್ಸವ ನಿಮಿತ್ತ ಸ್ಥಳೀಯ ಎಪಿಎಂಸಿ ಎದುರಿಗಿನ ಶ್ರೀ ರಾಘವೇಂದ್ರ ಸನ್ನಿಧಿಯಲ್ಲಿ ಆ.20 ರಂದು ಪೂರ್ವಾರಾಧನೆ ನಿಮಿತ್ತ ಶ್ರೀರಾಘವೇಂದ್ರ ವೈಭವ ಹಾಗೂ ಲಕ್ಷ್ಮೀದೇವಿ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ. ಆ.21ರಂದು ಮಧ್ಯಾರಾಧನೆಯಂದು ಮಧ್ಯಾಹ್ನ 12ಕ್ಕೆ ರಥೋತ್ಸವ ಹಾಗೂ ಆ. 22 ರಂದು ಉತ್ತರಾಧನೆ, ಪಲ್ಲಕ್ಕಿ ಸೇವೆ ನಡೆಯಲಿದೆ.

ನಿತ್ಯ ಸಂಜೆ 5ಕ್ಕೆ ಗೌರಿ ಭಜನಾ ಮತ್ತು ಹರೇ ಶ್ರೀನಿವಾಸ ಮಂಡಳಿಯಿಂದ ಭಕ್ತಿಗಾಯನ ನಡೆಯಲಿದೆ ಎಂದು ಮಠದ ವ್ಯವಸ್ಥಾಪಕ ಶ್ರೀವಾತ್ಸವಾಚಾರ್ಯ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net