ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

1 BKL 1
Published on

ಭಟ್ಕಳ: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವು ಇಲ್ಲಿನ ಮನುಪ್ರಭು ಸಂಕಲ್ಪದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರದಿಂದ ಪ್ರಾರಂಭಗೊಂಡಿದ್ದು, ಶುಕ್ರವಾರ ಸಹಸ್ರಾರು ಭಕ್ತರ ಹರ್ಷೊದ್ಗಾರಗಳ ನಡುವೆ ಮಧ್ಯಾರಾಧನೆ ಜರುಗಿತು.

ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ವೈದಿಕ ವೃಂದದಿಂದ ಧಾರ್ಮಿಕ ಅನುಷ್ಠಾನ ನಡೆದು, ವಿಶೇಷ ಪಂಚಾಮೃತ ಅಭಿಷೇಕ, ಮಹಾಪೂಜೆ, ಅಖಂಡ ಭಜನೆ ನಡೆಯಿತು. ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆಯಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಸಹಸ್ರಾರು ಜನರು ಸರತಿ ಸಾಲಿನಲ್ಲಿ ನಿಂತು ರಾಯರ ದರ್ಶನ ಮಾಡಿದರು. ಕಿಕ್ಕಿರಿದು ನೆರೆದ ಜನಸ್ತೋಮದ ನಡುವೆ ಸಂಜೆ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಭಕ್ತಾಧಿಗಳ ಹಸ್ತದಿಂದ ಶ್ರೀ ಗುರುಸಾರ್ವಭೌಮರ ಪಾದ್ಯಪೂಜೆ, ವಿಶೇಷ ಕ್ಷೀರಾಭಿಷೇಕ ನಡೆದವು. ಶನಿವಾರ ಸಾಮೂಹಿಕ ಗಣಹೋಮ, ಮಹಾಪೂಜೆ, ರಾತ್ರಿ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಉದಯ ಪ್ರಭು ಬಳಗದಿಂದ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net