ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

Aradhana mahotsava of Shri Raghavendra Swami
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
Published on

ಮುಂಡರಗಿ: ಪಟ್ಟಣದ ರಾಮೇನಹಳ್ಳಿ ರಸ್ತೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ. 20ರಿಂದ 22ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಜರುಗಲಿದೆ. ಆರಾಧನಾ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ಮಠದ ಗೌರವ ವಿಚಾರಣಾಕರ್ತ ನಾರಾಯಣ ಇಲ್ಲೂರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಆ. 20ರಂದು ಪೂರ್ವಾರಾಧನೆ, 21ರಂದು ಮಧ್ಯಾರಾಧನೆ, 22ರಂದು ಉತ್ತರಾರಾಧನೆ ಜರುಗಲಿದೆ. ಪ್ರತಿ ದಿನ ಪಂಚಾಮೃತ, ಉತ್ಸವ ರಾಯರಿಗೆ ಪಾದಪೂಜೆ, ಅಲಂಕಾರ ಸೇವೆ, ನೈವೇದ್ಯ, ಹಸ್ತೋದಕ ಮಹಾಮಂಗಳಾರತಿ ಮೊದಲಾದ ಪೂಜಾ ಕೈಂಕರ್ಯ ನೆರವೇರಲಿವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net